ಶಿವಮೊಗ್ಗ : ಸಾಗರದ ಜಾಮಿಯಾ ಮಸೀದಿ ಮತ್ತು ಮಜ್ಲಿಸೆ ಎ ಮುಂತಜಿಮಾ ಮುಸ್ಲಿಮಿನ್ ಸಮಿತಿ ವಕ್ಫ್ ಬೋರ್ಡ್ ನಿಯಮ ಮೀರಿ ವರ್ತಿಸುತ್ತಿದ್ದು, ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಕೂಡಲೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಗುರುವಾರ ನಗರದ ಮುಸ್ಲೀಂ ಸಮುದಾಯದ ಸದಸ್ಯರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.
ಇಂದು ಶಿವಮೊಗ್ಗದ ಸಾಗರದ ಎಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಂತ ಮುಸ್ಲೀಂ ಸಮುದಾಯದ ಮುಖಂಡರು, ವಕ್ಫ್ ಬೋರ್ಡ್ ನಿಯಮ ಪ್ರಕಾರ ಸಮಿತಿ ಮೂರು ವರ್ಷ ಆಡಳಿತ ನಡೆಸಬೇಕು. ಹಾಲಿ ಸಮಿತಿ ಅವಧಿ ಮುಗಿದಿದ್ದರೂ ಅಧಿಕಾರದಲ್ಲಿ ಮುಂದುವರೆಯುತ್ತಿದೆ. ಸಮಿತಿ ಅಧ್ಯಕ್ಷ ಫಯಾಜ್ ಅಹ್ಮದ್, ಕಾರ್ಯದರ್ಶಿ ಸೈಯದ್ ತಾಹೀರ್ ವಕ್ಫ್ ಬೋರ್ಡ್ ನಿಯಮ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂಬುದಾಗಿ ಆರೋಪಿಸಿದರು.
ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಮಿತಿ ಕಾರ್ಯದರ್ಶಿ ಸೈಯದ್ ತಾಹೀರ್ ಹಣಕಾಸಿನ ವ್ಯವಹಾರದಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ ಈ ಬಗ್ಗೆ ತನಿಖೆ ನಡೆಯಬೇಕು. ತಕ್ಷಣ ಹಾಲಿ ಸಮಿತಿಯನ್ನು ವಜಾಗೊಳಿಡಬೇಕು. ಜಾಮಿಯಾ ಮಸೀದಿ ಮತ್ತು ಅಂಗ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿ, ಹೊಸ ಸಮಿತಿ ತಕ್ಷಣ ರಚಿಸಬೇಕು. ಸಮಿತಿಯ ಆರ್ಥಿಕ ವಹಿವಾಟುಗಳನ್ನು ಮೂರನೇ ಪಾರ್ಟಿಯಿಂದ ಆಡಿಟ್ ಮಾಡಿಸಬೇಕು ಎಂಬುದಾಗಿ ಆಗ್ರಹಿಸಿದರು.
ವಕ್ಫ್ ಆಸ್ತಿಗೆ ಸಂಬoಧಿಸಿದ ಅನೇಕ ದಾಖಲೆಗಳು ನಾಪತ್ತೆಯಾಗಿರುವ ಮಾಹಿತಿ ಇದ್ದು ತಕ್ಷಣ ಮೂಲ ದಾಖಲೆಗಳನ್ನು ಪತ್ತೆಹಚ್ಚಲು ತನಿಖಾ ತಂಡ ನೇಮಿಸಬೇಕು. ಸಮುದಾಯದ ಸಾಮಾನ್ಯಸಭೆ ಕರೆದು ಹೊಸ ಸಮಿತಿ ರಚಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. 15 ದಿನಗಳಲ್ಲಿ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತೌಫಿಕ್ ಅಹ್ಮದ್, ಮಸೂದ್ ಅಹ್ಮದ್, ಜಮೀರ್ ಅಹ್ಮದ್ ಖಾನ್, ಮುದಸೀರ್ ಅಹ್ಮದ್ ಖಾನ್, ಸೈಯದ್ ಜುಲ್ಫಿ, ತಾಹೀರ್ ಅಹ್ಮದ್, ಶಾಬಾಜ್ ಅಹ್ಮದ್, ಅನೀಸ್ ಅಹ್ಮದ್ ಖಾನ್, ಫಾರ್ಮಾನುಲ್ಲಾ ಖಾನ್, ಅಸಾದ್, ನಜೀಂ, ಜೀಶಾನ್, ಅಜ್ಮಲ್ ಆಲಿ ಖಾನ್, ಆಸೀಪ್ ಅಹ್ಮದ್, ಸಲೀಂ, ಬಿಲಾಲ್ ಅಹ್ಮದ್, ಜಬಿವುಲ್ಲಾ, ಅಸಾದುಲ್ಲಾ, ನವೀದ್ ಅಹ್ಮದ್ ಇನ್ನಿತರರು ಹಾಜರಿದ್ದರು.
BREAKING: ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ ಭಾರತ
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








