ಬೆಳಗಾವಿ: ಕೋವಿಡ್ ತಳಿಯಾದ ಒಮಿಕ್ರಾನ್ ಉಪ-ರೂಪಾಂತರ ಬಿಎಫ್7 ಪತ್ತೆಯಾಗಿದೆ.ಇದರಿಂದ ಕರ್ನಾಟಕದಲ್ಲಿ ಆತಂಕ ಶುರುವಾಗಿದೆ.
ಇದೀಗ ರಾಜ್ಯದಲ್ಲಿ ಸಭೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಕೋವಿಡ್ ನೆಪದಿಂದ ಬಿಜೆಪಿ ಅವರು ಎಲೆಕ್ಷನ್ ನಡೆಸುವ ಪ್ಲ್ಯಾನ್ ನಲ್ಲಿದ್ದಾರೆ. ಹಾಗಾಗಿ ಜನರಿಗೆ ಕೊರೋನಾ ಆತಂಕ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ಸಿಯಾಗಿ ನಡೆಯುತ್ತಿದೆ.
ಹೀಗಾಗಿ ಇದನ್ನ ನೋಡೋದಕ್ಕೆ ಆಗದೆ ಕೇಂದ್ರ ಸರ್ಕಾರ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಪುನಃ ಕೋವಿಡ್-19 ಸೋಂಕು ನಿಯಂತ್ರಣ ನಿಯಮಾವಳಿಗಳನ್ನು ಜಾರಿಗೊಳಿಸುತ್ತಿದೆ ಹೇಳಿದ್ದಾರೆ.
ಮೇಕೆದಾಟು ಸಮಯದಲ್ಲೂ ನಮಗೆ ಇದೇ ರೀತಿ ಆಗಿತ್ತು. ಆಗ ಕೇಸ್ ಕೂಡ ಹಾಕಿದ್ದರು. ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡಿ ಅನ್ನೊ ಪ್ಲಾನ್ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.