ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 379 ಜನರಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಸಾವಿನ್ನಪ್ಪಿದ್ದಾನೆ.
ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 20,643 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 379 ಜನರಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 40,85,557ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
Bangalore Rain: ಬೆಂಗಳೂರಿಗರ ಗಮನಕ್ಕೆ: ಮುಂದಿನ ಮೂರು ತಿಂಗಳು ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು 198, ಬೆಳಗಾವಿ 11, ಚಿಕ್ಕಬಳ್ಳಾಪುರ 10, ದಕ್ಷಿಣ ಕನ್ನಡ 18, ಹಾಸನ 12, ಮೈಸೂರು 26, ರಾಯಚೂರು ಮತ್ತು ತಮಕೂರು 11 ಸೇರಿದಂತೆ 379 ಮಂದಿಗೆ ಕೊರೋನಾ ದೃಢಪಟ್ಟಿದೆ. ಸೋಂಕಿತರಾದಂತ 486 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈಗ 4271 ಸಕ್ರೀಯ ಸೋಂಕಿತರಿದ್ದಾರೆ ಎಂದು ತಿಳಿಸಿದೆ.
ಇಂದು ಸೋಂಕಿನಿಂದಾಗಿ ದಕ್ಷಿಣ ಕನ್ನಡದಲ್ಲಿ 85 ವರ್ಷದ ಸಾರಿ ಪ್ರಕರಣದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದಂತ ವ್ಯಕ್ತಿಯೊಬ್ಬರು ಸಾವಿನ್ನಪ್ಪಿದ್ದಾರೆ. ಹೀಗಾಗಿ ಇದುವರೆಗೆ 40217 ಸೋಂಕಿತರು ಸಾವನ್ನಪ್ಪಿದಂತೆ ಆಗಿದೆ ಎಂದಿದೆ.