ಬೆಂಗಳೂರು : ಚೀನಾದಲ್ಲಿ ಡೆಡ್ಲಿ ಕೊರೊನಾ ಹೆಚ್ಚಾದ ಬೆನ್ನಲ್ಲೆ ಇದೀಗ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸೋದಕ್ಕೆ ಮುಂದಾಗಿದ್ದು , ಈಗಾಗಲೇ ಎಲ್ಲೆಡೆ ಅಲರ್ಟ್ ಘೋಷಣೆ ಮಾಡಲಾಗುತ್ತಿದೆ. ಇದೀಗ ಬೆಂಗಳೂರಿನ ನಗರ ಪ್ರದೇಶಗಳ ಸ್ಕೂಲ್ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ಮಹತ್ವದ ಚಿಂತನೆ ನಡೆಸಲಾಗುತ್ತಿದೆ.
ರಾಜ್ಯದ 13 ಸಾವಿರ ಸ್ಕೂಲ್ಗಳನ್ನು ಕಡ್ಡಾಯ ಮಾಸ್ಕ್ ಧರಿಸೋದಕ್ಕೆ ಸ್ಕೂಲ್ ಅಸೋಷಿಯೇಷನ್ ಮುಂದಾಗಿದೆ. ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಈ ಯೋಚನೆ ಅತ್ಯಗತ್ಯವಾಗಿದೆ ಎಂದು ರುಸ್ಸಾ ಅಧಿಕಾರಿಗಳು ತಿಳಿಸಿದ್ದಾರೆ
ವಿದೇಶದಲ್ಲಿ ಕೊರೊನಾ ಸ್ಪೋಟ ಹಿನ್ನೆಲೆ ಬೆಂಗಳೂರು ವಿವಿ ಕುಲಸಚಿವರಿಂದ ಸುತ್ತೋಕೆ ಹೊರಡಿಸಲಾಗಿದೆ ಈಗಾಗಲೇ ಬೆಂ ಗಳೂರು ವಿವಿಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮಾಸ್ಕ್ ಧರಿಸಿ ಜಾಗೃತಿ ಮೂಡಿಸಿದ್ದಾರೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸೋದು ಉತ್ತಮ ಆರೋಗ್ಯಕರ ಎಂದೆನ್ನುತ್ತಾರೆ ವಿದ್ಯಾರ್ಥಿಗಳು , ಶಿಕ್ಷಕರು ಅಭಿಪ್ರಾಯ ತಿಳಿಸಿದ್ದಾರೆ.