ಬೆಂಗಳೂರು: ಸೇವಾ ಭದ್ರತೆ, ವೇತನ ಹೆಚ್ಚಳ ( Salary hike ) ಕುರಿತ ಶ್ರೀನಿವಾಸಚಾರಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಅಧಿವೇಶನ ವೇಳೆ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ನೌಕರರು ( Contractual employee of health and medical education department ) ನಿರ್ಧರಿಸಿದ್ದಾರೆ. ಈ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ರಾಜ್ಯ ಆರೋಗ್ಯ, ವೈದ್ಯಕೀಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಯಾಮೋಜಿ ಅವರು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಕಳೆದ ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರ ನೀಡಿದ್ದ ಸೇವಾಭದ್ರತೆ, ಸಮಾನ ವೇತನ, ಶ್ರೀನಿವಾಸಚಾರಿ ವರದಿ ಅನುಷ್ಠಾನ ಸೇರಿದಂತೆ ಕೆಲ ಬೇಡಿಕೆಗಳನ್ನು ಅತೀ ಶೀಘ್ರದಲ್ಲಿ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರ ತಮ್ಮ ಬೇಡಿಕೆಗಳ ಈಡೇರಿಕೆಗೆ ವಿಳಂಬ ದೋರಣೆ ಅನುಸರಿಸಿದರೆ ನೌಕರರ ಕುಟುಂಬದೊಂದಿಗೆ ಸೇರಿ ಬರುವ ಅಧಿವೇಶನ ಸಂದರ್ಭದಲ್ಲಿ ಅನಿರ್ದಿಷ್ಟವಾಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹೈದರಾಬಾದ್: ಈ ವರ್ಷ 24.64 ಲಕ್ಷ ರೂ. ಗೆ ಸೇಲಾಯ್ತು ʻಬಾಲಾಪುರ ಗಣೇಶ ಲಡ್ಡುʼ… ಏನಿದರ ವಿಶೇಷತೆ?
ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ರವರ ಸಮ್ಮುಖದಲ್ಲಿ ಆರೋಗ್ಯ ಸಚಿವರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕೊಟ್ಟ ಮಾತಿನಂತೆ ಮುಷ್ಕರ ವಾಪಾಸ್ ಪಡೆಯಲಾಗಿತ್ತು. ಭರವಸೆ ನೀಡಿ ಎರಡು ತಿಂಗಳು ಕಳೆದರೂ ಇದುವರೆಗೂ ಶ್ರೀನಿವಾಸಚಾರಿ ವರದಿ ಜಾರಿ ಆಗಿರುವುದಿಲ್ಲ. ಈ ವರದಿಯನ್ನು ಜಾರಿ ಮಾಡಿದರೆ ಗುತ್ತಿಗೆ ನೌಕರರು ದಸರಾ ಮತ್ತು ದೀಪಾವಳಿ ಹಬ್ಬವನ್ನು ನೆಮ್ಮದಿಯಿಂದ ಆಚರಣೆ ಮಾಡಲಿದ್ದೇವೆ ಇಲ್ಲವಾದರೆ ಕತ್ತಲಲ್ಲಿ ಕಾಲ ಕಳೆಯಲಿದ್ದೇವೆ ಎಂದು ತಿಳಿಸಿದರು.
BIGG NEWS : ಕೋವಿಡ್ ನಿಂದ ಮೃತರಾದವರ ಸಮಾಧಿಗಳ ಮೇಲೆ `ಬಿಜೆಪ ಭ್ರಷ್ಟೋತ್ಸವ’ ನಡೆಸಲು ಮುಂದಾಗಿದೆ : ಕಾಂಗ್ರೆಸ್ ಟೀಕೆ
ಆರೋಗ್ಯ ಸಿಬ್ಬಂದಿಗಳ ನೇಮಕಾತಿಯಲ್ಲಿ ಕೃಪಾಂಕ ಹಾಗೂ ವಯೋಮಿತಿ ಸಡಿಲಿಕೆ ನೀಡಿರುವುದು ಸ್ವಾಗತಾರ್ಹವಾದದು. ಆದರೆ ಇಲ್ಲಿ ತಾರತಮ್ಯ ನೀತಿ ಅನುಸರಿಸಲಾಗು ತ್ತಿದ್ದು ಎಂಬಿಬಿಎಸ್ ಮತ್ತು ತಜ್ಞ ವೈದ್ಯರ ನೇಮಕಾತಿಯಲ್ಲಿ ನೀಡಿದ ಪ್ರತಿ ವರ್ಷ ಕೃಪಾಂಕ ಹಾಗೂ ಗರಿಷ್ಠ ಕೃಪಾಂಕದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಇದನ್ನು ಸರಿಪಡಿಸಿ ತಿದ್ದುಪಡಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೂಡಲೇ ಶೇ.15 ವೇತನ ಹೆಚ್ಚಳ, ಸೇವಾ ಭದ್ರತೆ,ಚ ಜೀವ ವಿಮೆ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ಆರೋಗ್ಯ ಭಾಗ್ಯ ಹಾಗೂ ಇತರ ಬೇಡಿಕೆಗಳ ಅನುಷ್ಠಾನದ ಆದೇಶ ನೀಡಿ ನೌಕರರ ಹಿತಕಾಯಬೇಕೆಂದು. ಇಲ್ಲವಾದಲ್ಲಿ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟಾವಧಿಯವರೆಗೆ ಮುಷ್ಕರ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.