Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

BREAKING: ಕರ್ನಾಟಕ ರಾಜಕೀಯ ದೆಹಲಿ ಶಿಫ್ಟ್: ಇಂದು ತಡರಾತ್ರಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಯಾಣ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಓಲಾ ಎಲೆಕ್ಟ್ರಿಕ್ ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ
KARNATAKA

ಓಲಾ ಎಲೆಕ್ಟ್ರಿಕ್ ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ

By ವಸಂತ ಬಿ ಈಶ್ವರಗೆರೆ

ಧಾರವಾಡ: ಹುಬ್ಬಳ್ಳಿಯ ಕೆಶ್ವಾಪೂರದ ನಿವಾಸಿಯಾದ ಮೇಘಾ ದೇಶಪಾಂಡೆಯವರು ಎದುರುದಾರ ಓಲಾ ಎಲೆಕ್ಟ್ರಿಕ್ ಕಂಪನಿಯವರ ಸ್ಕೂಟರ್‍ನ್ನು ರೂ.1,62,010 ಪಾವತಿಸಿ ಖರೀದಿಸಿದ್ದರು. ಖರೀದಿಸಿದ ಮರು ದಿನವೇ ಅವರ ಸ್ಕೂಟರ ಮೇಲೆ ಕೆಲವೊಂದು ಮಾರ್ಕಗಳು ಮೂಡಿದ್ದವು ಅದನ್ನು ಎದುರುದಾರರಿಗೆ ತಿಳಿಸಿದಾಗ ಅವರು ಅದನ್ನು ಸರಿಪಡಿಸುವುದಾಗಿ ಹೇಳಿದರೂ ಅದನ್ನು ಸರಿಪಡಿಸಿ ಕೊಟ್ಟಿರಲಿಲ್ಲ. ಅಲ್ಲದೇ ವಾಹನ ಕೇಲವ 20-30 ಕಿ.ಮಿ. ನಂತರ ನಡು ರಸ್ತೆಯಲ್ಲಿ ಬಂದ್ ಬಿಳ್ಳುತ್ತಿತ್ತು ಮತ್ತು ವಾಹನದ ಆಯಿಲ್ ಸೋರುವಿಕೆಯೂ ಕಂಡು ಬಂದಿತು.

ಈ ವಿಷಯವನ್ನು ಎದುರುದಾರರಿಗೆ ತಿಳಿಸಿದಾಗ ಅವರು ಅದರ ಸ್ಟಾಕ್ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ. ಜೂನ್ 2024 ರಲ್ಲಿ ವಾಹನವೂ ಪೂರ್ತಿಯಾಗಿ ಉಪಯೊಗಿಸಲು ಬಾರದೇ ಇದ್ದ ಕಾರಣ ಎದುರುದಾರರಿಗೆ ಸಾಕಷ್ಟು ಸಲ ವಿನಂತಿಸಿದರೂ ಅದನ್ನು ಸರಿಪಡಿಸಿರುವುದಿಲ್ಲ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 31/08/2024 ರಂದು ದೂರನ್ನು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರುರೂ. 1 ಲಕ್ಷಕ್ಕಿಂತ ಹೆಚ್ಚು ಹಣ ವಿನಿಯೋಗಿಸಿ ತಮ್ಮ ಕೆಲಸಕ್ಕೆ ಅನುಕೂಲವಾಗಲಿ ಅಂತಾ ಎದುರುದಾರ ಓಲಾ ಕಂಪನಿಯಿಂದ ಸ್ಕೂಟರ್ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೋಗುವಾಗ ತಕ್ಷಣವೇ ನಿಲ್ಲುವುದು ಮತ್ತು ಆಯಿಲ್ ಸೋರುವಿಕೆ ಸಮಸ್ಯೆ ತಂದೊಡ್ಡಿತ್ತು. ವಾಹನ ಖರೀದಿಸಿದ ಮರು ದಿನವೇ ಆ ರೀತಿ ಆಗುವುದು ಸರಿಯಾದ ಕ್ರಮ ಅಲ್ಲ. ಎದುರುದಾರ ಓಲಾ ಎಲೆಕ್ಟ್ರಿಕ್ ಕಂಪನಿ ಮತ್ತು ಅವರ ಸರ್ವಿಸ್ ಸ್ಟೇಷನಗೆ ಹಾಗೂ ಅವರ ಗ್ರಾಹಕರ ಸಹಾಯವಾಣಿಗೆ ದೂರು ಕೊಟ್ಟರೂ ವಾಹನ ದುರಸ್ತಿಗೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗುವುದರೊಂದಿಗೆ ಅನುಚಿತ ವ್ಯಾಪಾರ ಪದ್ಧತಿ ಮಾಡಿದ್ದಾರೆಂದು ಆಯೋಗ ಎದುರುದಾರ ವಿರುದ್ಧ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಎಲೆಕ್ಟ್ರಿಕ್ ಓಲಾ ಕಂಪನಿಯ ಉತ್ಪಾದನೆಯ ಸ್ಕೂಟರಗಳು ಇಂತಹದೇ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ ಆದ ಬಗ್ಗೆ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು, ದೂರುಗಳು ದಾಖಲಾಗಿ ಎಲೆಕ್ಟ್ರಿಕ್ ಓಲಾ ಕಂಪನಿಯ ಉತ್ಪಾದನಾ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ಕೊಟ್ಟಿದ್ದರು. ಈ ಎಲ್ಲ ಸಂಗತಿಗಳನ್ನು ಆಧರಿಸಿ ಎದುರುದಾರ ಎಲೆಕ್ಟ್ರಿಕ್ ಓಲಾ ಕಂಪನಿ ಆಯಾದೂರುದಾರರಿಗೆ ಅವರು ಸಂದಾಯ ಮಾಡಿದ ವಾಹನದ ಮೌಲ್ಯ, ಹಣವನ್ನು ಶೆ.8 ರಂತೆ ಬಡ್ಡಿ ಸಮೇತ ಹಿಂದಿರುಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎಲೆಕ್ಟ್ರಿಕ್ ಓಲಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.

Good News: ರಾಜ್ಯ ಸರ್ಕಾರದಿಂದ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಗಣತಿದಾರರು, ಮೇಲ್ವಿಚಾರಕರಿಗೆ ಗೌರವಧನ ಬಿಡುಗಡೆ

ರಾಜ್ಯದ ‘ಪತ್ರಕರ್ತ’ರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ನಿವೇಶನ, ಮನೆ ಹಂಚಿಕೆ’ಯಲ್ಲಿ ಮೀಸಲು

Share. Facebook Twitter LinkedIn WhatsApp Email

Related Posts

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

2 Mins Read

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

1 Min Read

BREAKING: ಕರ್ನಾಟಕ ರಾಜಕೀಯ ದೆಹಲಿ ಶಿಫ್ಟ್: ಇಂದು ತಡರಾತ್ರಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಯಾಣ

2 Mins Read
Recent News

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

BREAKING: ಕರ್ನಾಟಕ ರಾಜಕೀಯ ದೆಹಲಿ ಶಿಫ್ಟ್: ಇಂದು ತಡರಾತ್ರಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಯಾಣ

ರಾಜ್ಯಾದ್ಯಂತ 995 ಕೆರೆಗಳ ಪುನಶ್ಚೇತನ: ಸಾಗರದ ಉಳ್ಳೂರಿನಲ್ಲಿ ಕೆರೆ ಸಮಿತಿ ರಚನೆ ಧರ್ಮಸ್ಥಳ ಯೋಜನೆ ಯಶಸ್ಸು

State News
KARNATAKA

BREAKING: ಎಸ್ಐಆರ್ ಸಭೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಹುದ್ದೆಯಿಂದ ಕಿತ್ತೊಗೆಯಲು ಸುರ್ಜೇವಾಲ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಶಿಸ್ತು ಉಲ್ಲಂಘಿಸುವವರ ವಿರುದ್ಧ ಹೈಕಮಾಂಡ್ ಅತ್ಯಂತ ಕಠಿಣ ನಿಲುವನ್ನು ತಳೆದಿದೆ. ದೇವನಹಳ್ಳಿ ಹೊರವಲಯದ ಖಾಸಗಿ…

ಮೇ.26ರಂದು ಬೆಳಗಾವಿ ಪಾಲಿಕೆಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್ ನೇತೃತ್ವ ಮುತ್ತಿಗೆ: ಕರ್ನಾಟಕ ಪರ ಗೊತ್ತುವಳಿಗೆ ‎ಆಗ್ರಹ

BREAKING: ಕರ್ನಾಟಕ ರಾಜಕೀಯ ದೆಹಲಿ ಶಿಫ್ಟ್: ಇಂದು ತಡರಾತ್ರಿ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರಯಾಣ

ರಾಜ್ಯಾದ್ಯಂತ 995 ಕೆರೆಗಳ ಪುನಶ್ಚೇತನ: ಸಾಗರದ ಉಳ್ಳೂರಿನಲ್ಲಿ ಕೆರೆ ಸಮಿತಿ ರಚನೆ ಧರ್ಮಸ್ಥಳ ಯೋಜನೆ ಯಶಸ್ಸು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.