Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ಬಿಸಿಸಿಐ ಏನೂ ಮಾಡಬೇಕಾಗಿಲ್ಲ” : ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರ ಬೆದರಿಕೆಗೆ ‘ರಾಜೀವ್ ಶುಕ್ಲಾ’ ಪ್ರತಿಕ್ರಿಯೆ!

05/02/2026 2:43 PM

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

05/02/2026 2:41 PM

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!
KARNATAKA

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

By kannadanewsnow5705/02/2026 2:41 PM

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ಶಿವಕುಮಾರ್ ಎಸ್. ಎಂಬುವವರು ಬೆಂಗಳೂರು ಫ್ಲಿಪ್‌ಕಾರ್ಟ್ ಮುಖ್ಯ ವ್ಯವಸ್ಥಾಪಕರು ಹಾಗೂ ಉತ್ತರ ಪ್ರದೇಶದ ಮುಜಫರ್‌ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಇವರುಗಳ ವಿರುದ್ಧ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ಪಡೆದಿರುತ್ತಾರೆ ಎಂದು ನೀಡಿದ ದೂರನ್ನು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ದೂರುದಾರರು ಎದುರುದಾರರಿಂದ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಶೇ. 76 ರಷ್ಟು ರಿಯಾಯಿತಿದರದಲ್ಲಿ ರೂ. 540/- ಹಾಗೂ ಶಿಪ್ಪಿಂಗ್ ಚಾರ್ಚ್ ರೂ. 41/- ಸೇರಿ ರೂ. 540/- ಗಳನ್ನು ಪಾವತಿಸಿ ಖರೀದಿಸಿರುತ್ತಾರೆ. ಆದರೆ ಪರೀಶೀಲಿದಾಗ ಎಂ.ಆರ್.ಪಿ. ಬೆಲೆಯನ್ನು ಅಳಿಸಿ, ಬಿಳಿ ಕಾಗದವನ್ನು ಅಂಟಿಸಿರುತ್ತಾರೆ. ಅದರ ನಿಜವಾದ ಬೆಲೆ 324/- ರೂ.ಗಳಿದ್ದು ರೂ. 216/-ಗಳ ಹೆಚ್ಚಿನ ಮೊತ್ತ ಪಡೆದಿದ್ದು, ಈ ಕುರಿತು ಎದುರುದಾರರಿಗೆ ಹೆಚ್ಚಿನ ಹಣವನ್ನು ಮರುಪಾವತಿಸುವಂತೆ ಲೀಗಲ್ ನೋಟೀಸ್ ನೀಡಿರುತ್ತಾರೆ. ಆದರೆ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.

ಆಯೋಗವು ದೂರುದಾರರ ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರ ಎಂಆರ್‌ಪಿ ಗಿಂತ ಹೆಚ್ಚಿ ಹಣವನ್ನು ಪಡೆದು ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ದೂರುದಾರರಿಂದ ಪಡೆದಿರುವ ಹೆಚಿನ ಮೊತ್ತ ರೂ. 216/-ಗಳಿಗೆ ದಿ:13/09/2024ರಿಂದ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣವನ್ನು ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಡಿ.31 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.

Consumer Commission orders a fine of Rs 25000 on Flipkart for charging more than `MRP'!
Share. Facebook Twitter LinkedIn WhatsApp Email

Related Posts

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM1 Min Read

ALERT : ಪ್ರತಿ ದಿನ `ಜಂಕ್ ಫುಡ್’ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಅಪಾಯ ಹೆಚ್ಚಳ.!

05/02/2026 2:38 PM2 Mins Read

ALERT : ಮಗು ಯಾವುದಾದ್ರೂ ವಸ್ತು ನುಂಗಿದರೆ ತಕ್ಷಣ ಏನು ಮಾಡಬೇಕು? ಪೋಷಕರು ತಿಳಿಯಲೇಬೇಕಾದ ವಿಷಯಗಳಿವು.!

05/02/2026 2:28 PM2 Mins Read
Recent News

“ಬಿಸಿಸಿಐ ಏನೂ ಮಾಡಬೇಕಾಗಿಲ್ಲ” : ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕಾರ ಬೆದರಿಕೆಗೆ ‘ರಾಜೀವ್ ಶುಕ್ಲಾ’ ಪ್ರತಿಕ್ರಿಯೆ!

05/02/2026 2:43 PM

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

05/02/2026 2:41 PM

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM

ALERT : ಪ್ರತಿ ದಿನ `ಜಂಕ್ ಫುಡ್’ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಅಪಾಯ ಹೆಚ್ಚಳ.!

05/02/2026 2:38 PM
State News
KARNATAKA

`MRP’ ಗಿಂತ ಹೆಚ್ಚಿನ ಹಣ ಪಡೆದ ಫ್ಲಿಪ್‌ ಕಾರ್ಟ್ ಗೆ 25,000 ರೂ. ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ.!

By kannadanewsnow5705/02/2026 2:41 PM KARNATAKA 2 Mins Read

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ಶಿವಕುಮಾರ್ ಎಸ್. ಎಂಬುವವರು ಬೆಂಗಳೂರು ಫ್ಲಿಪ್‌ಕಾರ್ಟ್ ಮುಖ್ಯ ವ್ಯವಸ್ಥಾಪಕರು ಹಾಗೂ ಉತ್ತರ ಪ್ರದೇಶದ…

ಲಂಚ ಕೇಳಿದ ಅಧಿಕಾರಿಗೆ ಈ ವಿನೂತನ ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ

05/02/2026 2:40 PM

ALERT : ಪ್ರತಿ ದಿನ `ಜಂಕ್ ಫುಡ್’ ಸೇವಿಸುವವರೇ ಎಚ್ಚರ : `ಕ್ಯಾನ್ಸರ್’ ಅಪಾಯ ಹೆಚ್ಚಳ.!

05/02/2026 2:38 PM

ALERT : ಮಗು ಯಾವುದಾದ್ರೂ ವಸ್ತು ನುಂಗಿದರೆ ತಕ್ಷಣ ಏನು ಮಾಡಬೇಕು? ಪೋಷಕರು ತಿಳಿಯಲೇಬೇಕಾದ ವಿಷಯಗಳಿವು.!

05/02/2026 2:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.