ಬೆಂಗಳೂರು: ಡಬಲ್ ಇಂಜಿನ್ ಸರಕಾರವಾಗಿರುವುದರಿಂದ ( Double Engine Government ) ರಾಜ್ಯದ ಎಲ್ಲಾ ವರ್ಗದವರಿಗೂ ಉಪಯೋಗವಾಗುವ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರು ಅನುಷ್ಟಾನಗೊಳಿಸಿದ್ದಾರೆ. ಮತಬ್ಯಾಂಕಿಗಾಗಿ ಒಂದು ಸಮುದಾಯವನ್ನು ಓಲೈಸುವ ಕಾಂಗ್ರೆಸ್ಸಿಗರಿಗೆ ಕೇಂದ್ರ, ರಾಜ್ಯ ಸರಕಾರವನ್ನು ( Karnataka Government ) ಟೀಕಿಸುವ ನೈತಿಕತೆ ಇಲ್ಲ ಎಂದು ಜನರಿಗೆ ಗೊತ್ತಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ( Karnataka BJP State President Nalin Kumar Kateel ) ವಾಗ್ಧಾಳಿ ನಡೆಸಿದ್ದಾರೆ.
ಡಬಲ್ ಇಂಜಿನ್ ಸರಕಾರವಾಗಿರುವುದರಿಂದ ರಾಜ್ಯದ ಎಲ್ಲಾ ವರ್ಗದವರಿಗೂ ಉಪಯೋಗವಾಗುವ ಯೋಜನೆಗಳನ್ನು ಪ್ರಧಾನಿ ಶ್ರೀ @narendramodi ಹಾಗೂ ಸಿಎಂ ಶ್ರೀ @BSBommai ಅವರು ಅನುಷ್ಟಾನಗೊಳಿಸಿದ್ದಾರೆ.
ಮತಬ್ಯಾಂಕಿಗಾಗಿ ಒಂದು ಸಮುದಾಯವನ್ನು ಓಲೈಸುವ ಕಾಂಗ್ರೆಸ್ಸಿಗರಿಗೆ ಕೇಂದ್ರ, ರಾಜ್ಯ ಸರಕಾರವನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಜನರಿಗೆ ಗೊತ್ತಿದೆ.
— Nalinkumar Kateel (@nalinkateel) November 12, 2022
ಈ ಕುರಿತು ಟ್ವಿಟ್ ( Twitter ) ಮಾಡಿರುವ ಅವರು, ಈ ನಾಡಿನ ಪೂಜ್ಯರಾದ ವಾಲ್ಮೀಕಿ ಮಹರ್ಷಿ, ಕನಕದಾಸರು, ನಾಡಪ್ರಭು ಕೆಂಪೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವದ ಸಂಕೇತವಾಗಿ ಮಾಲಾರ್ಪಣೆ ಮಾಡಿದಾಗ ಟೀಕಿಸುವ ಕಾಂಗ್ರೆಸ್ಸಿಗರಿಗೆ ಮತಾಂಧ ಟಿಪ್ಪು ಮಾತ್ರ ಶ್ರೇಷ್ಠ ವ್ಯಕ್ತಿಯೇ? ನಾಡಿನ ಮಹಾನ್ ಚೇತನರ ಸಾಧನೆಗಳನ್ನು ನಾವು ಸ್ಮರಿಸುವಾಗ ಕಾಂಗ್ರೆಸ್ಸಿಗರಿಗೆ ಯಾಕೆ ನೋವಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಈ ನಾಡಿನ ಪೂಜ್ಯರಾದ ವಾಲ್ಮೀಕಿ ಮಹರ್ಷಿ, ಕನಕದಾಸರು, ನಾಡಪ್ರಭು ಕೆಂಪೇಗೌಡರಿಗೆ ಪ್ರಧಾನಿ ಶ್ರೀ @narendramodi ಅವರು ಗೌರವದ ಸಂಕೇತವಾಗಿ ಮಾಲಾರ್ಪಣೆ ಮಾಡಿದಾಗ ಟೀಕಿಸುವ ಕಾಂಗ್ರೆಸ್ಸಿಗರಿಗೆ ಮತಾಂಧ ಟಿಪ್ಪು ಮಾತ್ರ ಶ್ರೇಷ್ಠ ವ್ಯಕ್ತಿಯೇ?
ನಾಡಿನ ಮಹಾನ್ ಚೇತನರ ಸಾಧನೆಗಳನ್ನು ನಾವು ಸ್ಮರಿಸುವಾಗ ಕಾಂಗ್ರೆಸ್ಸಿಗರಿಗೆ ಯಾಕೆ ನೋವಾಗುತ್ತದೆ?
— Nalinkumar Kateel (@nalinkateel) November 12, 2022
ಬ್ರಹ್ಮಾಂಡ ಭ್ರಷ್ಟಾಚಾರದ ಜನಕರಾದ ಕಾಂಗ್ರೆಸ್ಸಿಗರು ಮತ್ತು ಭ್ರಷ್ಟಾಚಾರದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ ಜೀವನವನ್ನೇ ಸಮಾಜ, ದೇಶಕ್ಕಾಗಿ ಮುಡುಪಾಗಿಟ್ಟ ಶ್ರೇಷ್ಠ ಮಹನೀಯರನ್ನು ನರೇಂದ್ರ ಮೋದಿ ಅವರು ಸ್ಮರಿಸುವಾಗ ಸಹಿಸಲು ಸಾಧ್ಯವಾಗದೇ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಬ್ರಹ್ಮಾಂಡ ಭ್ರಷ್ಟಾಚಾರದ ಜನಕರಾದ ಕಾಂಗ್ರೆಸ್ಸಿಗರು ಮತ್ತು ಭ್ರಷ್ಟಾಚಾರದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ @DKShivakumar ಅವರಿಗೆ ಜೀವನವನ್ನೇ ಸಮಾಜ, ದೇಶಕ್ಕಾಗಿ ಮುಡುಪಾಗಿಟ್ಟ ಶ್ರೇಷ್ಠ ಮಹನೀಯರನ್ನು ಶ್ರೀ @narendramodi ಅವರು ಸ್ಮರಿಸುವಾಗ ಸಹಿಸಲು ಸಾಧ್ಯವಾಗದೇ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ. https://t.co/UVAys6QFgT
— Nalinkumar Kateel (@nalinkateel) November 12, 2022