ಬೆಂಗಳೂರು: ಬೆಳಗಾವಿ ಮೂಲಕ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಯವರು ಕಾಂಗ್ರೆಸ್ ಮುಖಂಡೆ ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ಆದ್ರೇ.. ಆತ ನನ್ನ ಗಂಡ ಎಂಬುದಾಗಿ ಹೇಳುವ ಮೂಲಕ ನವ್ಯಶ್ರೀ ಇಡೀ ಪ್ರಕರಣಕ್ಕೇ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಹಾಗಾದ್ರೇ.. ಈ ಪ್ರಕರಣ ಇಷ್ಟು ವೈರಲ್ ಹಿಂದಿನ ಅಸಲಿ ಕಾರಣವೇನು.? ಆ ಬಗ್ಗೆ ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ನವ್ಯಶ್ರೀ ಮಾತನಾಡಿ ಹೇಳಿದ್ದೇನು ಎನ್ನುವ ಬಗ್ಗೆ ಮುಂದೆ ಓದಿ..
ಸಾಮಾಜಿಕ ಕಳಕಳಿಯ ದೃಷ್ಠಿಯಿಂದ ನವ್ಯಶ್ರೀ ಫೌಂಡೇಷನ್ ಮೂಲಕ ಗುರ್ತಿಸಿಕೊಂಡಿದ್ದವರು ಚನ್ನಪಟ್ಟಣ ಮೂಲಕ ನವ್ಯಶ್ರೀ. ವಿವಿಧ ರೀತಿಯಲ್ಲಿ ಹಲವು ಸಾಮಾಜಿಕ ಕಾರ್ಯದ ಮೂಲಕ ಟೆಕ್ಕಿಯಾಗಿದ್ದೂ ಮಾಡಿದ್ದರ ಬಗ್ಗೆ ಹಲವು ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಉಂಟು. ಈ ಮೂಲಕ ರಾಜಕೀಯ ಒಡನಾಟ ಬೆಳಸಿಕೊಂಡಂತ ನವ್ಯಶ್ರೀ, ಮೊದಲ ಬಾರಿಗೆ 2018ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸೋಲು ಕೂಡ ಕಂಡಿದ್ದರು.
ಉತ್ತರಾಖಂಡ ಪ್ರವಾಹದಲ್ಲಿ ಕೊಚ್ಚಿಹೋದ ಶಾಲಾ ಬಸ್… ಮುಂದೇನಾಯ್ತು ಇಲ್ಲಿ ನೋಡಿ!
ಈ ಬಳಿಕ ಕಾಂಗ್ರೆಸ್ ನಾಯಕರಾದಂತ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಅವರೊಂದಿಗೆ ಗುರ್ತಿಸಿಕೊಂಡಿದ್ದಂತ ಇವರು, ಇಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಬಂಧಿಸಿದ ಸಂದರ್ಭದಲ್ಲಿಯೂ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಕಾಂಗ್ರೆಸ್ ಯುವ ನಾಯಕಿಯೆಂದೇ ಬಿಂಬಿಸಲಾಗಿತ್ತು. ಇಂತಹ ನವ್ಯಶ್ರೀ ವಿರುದ್ಧ ಈಗ ಹನಿಟ್ರ್ಯಾಪ್ ಆರೋಪ ಕೇಳಿ ಬಂದಿದೆ.
ಆ ಬಗ್ಗೆ ನಮ್ಮ ಕನ್ನಡ ನ್ಯೂಸ್ ನೌ ಸಂಪರ್ಕಿಸಿದಾಗ, ನನ್ನ ವೀಡಿಯೋವನ್ನೇ ನಾನು ಹನಿಟ್ರ್ಯಾಫ್ ಆರೋಪದಲ್ಲಿ ಹೇಗ್ ಬಿಡೋದಕ್ಕೆ ಆಗುತ್ತದೆ. ನಾನು ಯಾರನ್ನು ಹಾಗೆ ಮಾಡಿಲ್ಲ. ಇದು ನನ್ನ ತೇಜೋವಧೆ ಮಾಡೋದಕ್ಕಾಗಿ ನಡೆಸಲಾಗಿರುವಂತ ಷಡ್ಯಂತ್ರವಾಗಿದೆ. ನಾನು ಹೀಗೆ ಮಾಡಿದ್ದೇನೆ ಎಂಬುದಾಗಿ ಬೆಳಗಾವಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೇ ಈವರೆಗೆ ಪೊಲೀಸರು ಯಾರೂ ನನ್ನ ಸಂಪರ್ಕಿಸಿಲ್ಲ ಎಂಬುದಾಗಿ ಹೇಳಿದರು.
BIGG NEWS : ಹಿಮಾಚಲದ ಕಿನ್ನೌರ್ ನಲ್ಲಿ ಮುಂದಿನ 2 ದಿನ ಭಾರಿ ಮಳೆ; ಹವಾಮಾನ ಇಲಾಖೆ ಸೂಚನೆ
ನನ್ನ ಗಂಡನೇ ನನ್ನ ವಿರುದ್ಧ ಹೀಗೆಲ್ಲಾ ಮಾಡ್ತಾ ಇದ್ದಾರೆ..
ಹನಿಟ್ರ್ಯಾಫ್ ಆರೋಪ ಮಾಡುತ್ತಿರುವಂತ ರಾಜಕುಮಾರ ಟಾಕಳೆ ನನ್ನ ಗಂಡ. ಆತನೇ ಹೀಗೆಲ್ಲಾ ಮಾಡುತ್ತಿದ್ದಾನೆ. ನನ್ನು ಆತ ಕಳೆದ ಡಿಸೆಂಬರ್ ನಲ್ಲಿ ಕಿಡ್ನಾಪ್ ಮಾಡಿ ಮದುವೆಯಾಗಿದ್ದನು. ಆತನೊಂದಿಗೆ ಒಂದು ವಾರಗಳ ಕಾಲ ಸಂಸಾರ ಮಾಡಿದ್ದೇನೆ. ಆದ್ರೇ ಅವರಿಗೆ ಮದುವೆಯಾಗಿರೋದು ನನಗೆ ಗೊತ್ತಿರಲಿಲ್ಲ. ಆತನ ಹೆಂಡತಿಯಿಂದ ರಾಜಕುಮಾರ ಟಾಕಳೆಯ ಮತ್ತೊಂದು ಮುಖ ದರ್ಶನವಾಗಿದೆ. ಆ ಬಗ್ಗೆ ಬೆಳಗಾವಿಯ ಮಹಿಳಾ ಠಾಣೆಗೆ ಎರಡು ಬಾರಿ ದೂರು ನೀಡಲಾಗಿತ್ತು. ಅಲ್ಲಿ ರಾಜೀ ಸಂಧಾನದ ಬಳಿಕ, ನಾನು ಆತನಿಂದ ದೂರಾಗಿದ್ದೆನು ಎಂಬುದಾಗಿ ತಿಳಿಸಿದರು.
ರಿವೇಂಜ್ ತೀರಿಸಿಕೊಳ್ಳಲು ಹೀಗೆಲ್ಲಾ ಆರೋಪ
ನನಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನದ ಸಂದರ್ಭದಲ್ಲಿ ಹಿರಿಯರು, ಪೊಲೀಸರು ನಿನಗೆ ವಯಸ್ಸಿದೆ. ಆತನಿಗೆ ಈಗಾಗಲೇ ಮದುವೆಯಾಗಿದೆ. ಎರಡನೇ ಹೆಂಡತಿಯ ಸ್ಥಾನ ಬೇಕಾ ಎಂಬುದಾಗಿ ಮನವರಿಕೆ ಮಾಡಿಕೊಟ್ಟು, ಆತನಿಂದ ದೂರಾಗುವಂತೆ ಕೋರಿಕೊಂಡಿದ್ದರು. ಆ ಬಳಿಕ ನಾನು ದೂರಾಗಿದ್ದೆ. ನಾನು ಆತನಿಂದ ದೂರಾಗಿರುವ ಕಾರಣ ನನ್ನ ಮೇಲೆ ಸೇಡು ತೀರಿಸಿಕೊಳ್ಳೋದಕ್ಕಾಗಿ ಹನಿಟ್ರ್ಯಾಪ್ ಆರೋಪ, ಬ್ಲಾಕ್ ಮೇಲ್ ಆರೋಪ ಮಾಡುತ್ತಿದ್ದಾನೆ. ಆತ ವೀಡಿಯೋ ಮಾಡೋದ್ರಲ್ಲಿ ಎಕ್ಸ್ ಪರ್ಟ್ ಎಂದು ಹೇಳಿದರು.
ಸ್ಯಾಂಡ್ವಿಚ್ & ಐಸ್ ಕ್ರೀಂ ಪೋಸ್ಟರನ್ನು ನಕ್ಕಿದ ಹಸಿದ ಶ್ವಾನ : ಹೃದಯಸ್ಪರ್ಶಿ Video Viral
ಕಿಡ್ನಾಪ್ ವೀಡಿಯೋ, ಮದುವೆಯಾದ ಬಗ್ಗೆ ಸಾಕ್ಷಿಗಳು ನನ್ನ ಬಳಿ ಇವೆ
ರಾಜಕುಮಾರ ಟಾಕಳೆ ನನಗೆ ಶಾಸಕ ಶ್ರೀಮಂತ ಪಾಟೀಲ್ ಬಳಿಯಲ್ಲಿ ಓಎಸ್ಡಿ ಆಗಿದ್ದಂತ ಸಂದರ್ಭದಲ್ಲಿ ಪರಿಚಯವಾಗಿದ್ದರು. ಇಬ್ಬರು ಸಾಮಾಜಿಕ ಜೀವನದಲ್ಲಿ ಇದ್ದೆವು. ಇಂತಹ ರಾಜಕುಮಾರ ಟಾಕಳೆ ನನ್ನನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದರು. ಅವರು ನನ್ನ ಅಪಹರಿಸಿದಂತ ಸಿಸಿಟಿವಿ ವೀಡಿಯೋ ಪೂಟೇಜ್ ನನ್ನ ಬಳಿಯಲ್ಲಿದೆ. ಅವರು ಕಟ್ಟಿದ ತಾಳಿ, ಆ ತಾಳಿ ಖರೀದಿಸಿದಂತ ಬಿಲ್ ಕೂಡ ನನ್ನ ಬಳಿಯಲ್ಲಿ ಇದೆ ಎಂಬುದಾಗಿ ತಿಳಿಸಿದರು.
ನನ್ನ ಗಂಡನೇ ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ
ನಾನು ಯಾವುದೇ ಹನಿಟ್ರ್ಯಾಪ್ ಮಾಡಿಲ್ಲ. ರಾಜಕುಮಾರ ಟಾಕಳೆಯೇ ನನ್ನ ಬಗ್ಗೆ ವೀಡಿಯೋ ರಿಲೀಸ್ ಮಾಡಿ ಹನಿಟ್ರ್ಯಾಪ್ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಇದೆಲ್ಲಾ ನನ್ನ ತೇಜೋವಧೆ ಮಾಡೋದಕ್ಕಾಗಿ ನಡೆಯುತ್ತಿರುವಂತ ಷಡ್ಯಂತ್ರವಾಗಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸೂಕ್ತ ದಾಖಲೆಯೊಂದಿಗೆ ಮಾಧ್ಯಮಗಳ ಮುಂದೆ ಬಂದು ಮಾಹಿತಿ ಬಿಡುಗಡೆ ಮಾಡೋದಾಗಿ ಹೇಳಿದರು.
BIGG NEWS : ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ತೆರೆಯಲು ನಿರ್ಧಾರ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ನನಗೆ ಅನ್ಯಾಯವಾಗಿದೆ
ಆತನಿಗೆ ಮದುವೆಯಾಗಿದೆ ಎಂಬುದಾಗಿ ಗೊತ್ತಿರದೇ ಮದುವೆಯಾಗಿದ್ದು ನನ್ನದೇ ತಪ್ಪು. ಈಗ ಹಲವು ಆರೋಪಗಳನ್ನು ಎದುರಿಸುತ್ತಿದ್ದೇನೆ. ಈ ಮೂಲಕ ನನ್ನ ಮಾನಹಾನಿಯಾಗಿದೆ. ನನ್ನ ಬದುಕೇ ನಾಶವಾಗುವಂತೆ ಆಗಿದೆ. ನನಗೆ ಅನ್ಯಾಯವಾಗಿರುವಾಗ ನಾನು ಆರೋಪ, ಆಪಾಧನೆ ಮಾಡಬೇಕಾಗಿತ್ತು. ಆದ್ರೇ ನನ್ನ ವಿರುದ್ಧವೇ ಈಗ ಹನಿಟ್ರ್ಯಾಪ್ ಆರೋಪ ಎದ್ದಿದೆ. ಆದ್ರೇ ನಾನು ಮಾಡಿಲ್ಲ. ಇದೆಲ್ಲಾ ಸುಳ್ಳು ಎಂಬುದಾಗಿ ಸ್ಪಷ್ಟಪಡಿಸಿದರು.
ರಾಜಕುಮಾರ್ ಟಾಕಳೆ ದೂರು ಏನು.?
ಅಂದಹಾಗೇ ಬೆಳಗಾವಿ ಮೂಲಕ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವಂತ ರಾಜಕುಮಾರ ಟಾಕಳೆಯವರು, ನವ್ಯಶ್ರೀ ರಾಮಚಂದ್ರರಾವ್ ಮಾನಸಿಕ ಚಿತ್ರಹಿಂಸೆ ಮಾಡುತ್ತಿದ್ದಾರೆ. ಸುಳ್ಳು ಕೇಸ್ ನೀಡಿ ಜೈಲಿಗೆ ಕಳುಹಿಸೋದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬುದಾಗಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ನವ್ಯಶ್ರೀ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ