ಬೆಂಗಳೂರು: ಸಂವಿಧಾನವನ್ನು ಸುಟ್ಟ ಪೆರಿಯಾರ್‌ರನ್ನು ಪೂಜಿಸುವ ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂಬುದಾಗಿ ಕರ್ನಾಟಕ ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಇಂದು ಎಕ್ಸ್ ಮಾಡಿದ್ದು, 42ನೇ ತಿದ್ದುಪಡಿ ಮೂಲಕ ಸಂವಿಧಾನದ ಸಾರ್ವಭೌಮತ್ವಕ್ಕೆ ಧಕ್ಕೆ ತಂದು, ಅದರ ಮೂಲ ಸ್ವರೂಪವನ್ನು ತಿರುಚಿದ ಏಕೈಕ ಸಂವಿಧಾನ ವಿರೋಧಿ ರಾಜಕೀಯ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ವಾಗ್ಧಾಳಿ ನಡೆಸಿದೆ.
ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ್ದ ಈ ಅಪಚಾರವನ್ನು 44ನೇ ತಿದ್ದುಪಡಿ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಸ್ಥಿರೀಕರಣಗೊಳಿಸಿದ್ದು ಬಿಜೆಪಿ ಎಂಬುದನ್ನು ಇತಿಹಾಸವೇ ಸಾರಿ ಹೇಳುತ್ತದೆ ಎಂದು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಂವಿಧಾನದ ಪ್ರತಿಗೆ ನಮಸ್ಕರಿಸಿದ್ದು, ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದಿದ್ದು, ಸಂವಿಧಾನದ ಬಗ್ಗೆ ಬಿಜೆಪಿಗಿರುವ ಗೌರವ ಮತ್ತು ಭಕ್ತಿಯ ಪ್ರತೀಕವಾಗಿದೆ.
42ನೇ ತಿದ್ದುಪಡಿ ಮೂಲಕ ಸಂವಿಧಾನದ ಸಾರ್ವಭೌಮತ್ವಕ್ಕೆ ಧಕ್ಕೆ ತಂದು, ಅದರ ಮೂಲ ಸ್ವರೂಪವನ್ನು ತಿರುಚಿದ ಏಕೈಕ ಸಂವಿಧಾನ ವಿರೋಧಿ ರಾಜಕೀಯ ಪಕ್ಷವೆಂದರೆ ಅದು ಕಾಂಗ್ರೆಸ್.
ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ್ದ ಈ ಅಪಚಾರವನ್ನು 44ನೇ ತಿದ್ದುಪಡಿ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಸ್ಥಿರೀಕರಣಗೊಳಿಸಿದ್ದು ಬಿಜೆಪಿ ಎಂಬುದನ್ನು ಇತಿಹಾಸವೇ ಸಾರಿ… https://t.co/YHxDMQDMHg
— BJP Karnataka (@BJP4Karnataka) March 10, 2024