ನವದೆಹಲಿ: ಕಾಂಗ್ರೆಸ್ ತನ್ನ ಭಾರತ್ ಜೋಡೋ ಯಾತ್ರೆಯ ನಡುವೆ ಟ್ವೀಟ್ ಮಾಡಿದ್ದು, ಇದು ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಪೋಸ್ಟ್ನಲ್ಲಿ, ಆರ್ಎಸ್ಎಸ್ ಕಾರ್ಯಕರ್ತರು ಈ ಮೊದಲು ಧರಿಸುತ್ತಿದ್ದ ಖಾಕಿ ಚಡ್ಡಿಗೆ ಬೆಂಕಿಯನ್ನು ಇಟ್ಟಿದೆ. ಈ ಚಿತ್ರದ ಮೂಲಕ ಕಾಂಗ್ರೆಸ್ ಆರ್ಎಸ್ಎಸ್-ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ.
ಕಾಂಗ್ರೆಸ್ ತನ್ನ ಪೋಸ್ಟ್ನಲ್ಲಿ, ದೇಶವನ್ನು ದ್ವೇಷದ ವಾತಾವರಣದಿಂದ ಮುಕ್ತಗೊಳಿಸುವ ಗುರಿಯತ್ತ ನಾವು ಹೆಜ್ಜೆಗಳನ್ನು ಇಡುತ್ತಿದ್ದೇವೆ ಮತ್ತು ಆರ್ಎಸ್ಎಸ್-ಬಿಜೆಪಿ ಮಾಡಿದ ಹಾನಿಗೆ ಪರಿಹಾರವನ್ನು ನೀಡುತ್ತಿದ್ದೇವೆ ಎಂದು ಬರೆದಿದೆ.
To free the country from shackles of hate and undo the damage done by BJP-RSS.
Step by step, we will reach our goal.#BharatJodoYatra 🇮🇳 pic.twitter.com/MuoDZuCHJ2
— Congress (@INCIndia) September 12, 2022