ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರ ( Congress President Election 2022 ) ಆಯ್ಕೆಗಾಗಿ ದಿನಾಂಕ 17-10-2022ರಂದು ಚುನಾವಣೆ ನಿಗಧಿಯಾಗಿದೆ. ಅಂದು ಕಡ್ಡಾಯವಾಗಿ ಹಾಜರಾಗಿ, ಮತ ಚಲಾಯಿಸುವಂತೆ ನಾಯಕರಿಗೆ ಕೆಪಿಸಿಸಿಯಿಂದ ನಿರ್ದೇಶ ನೀಡಲಾಗಿದೆ.
ಈ ಕುರಿತಂತೆ ಕೆಪಿಸಿಸಿಯ ಶಾಸಕಾಂಗ ಪಕ್ಷದ ಎಲ್ಲಾ ಸದಸ್ಯರು, ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯ ಸದಸ್ಯರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಶಿವಮೊಗ್ಗ: ಸಂಗ್ರಹಿಸಿದ ಘನತ್ಯಾಜ್ಯ ಸಮರ್ಪಕ ವಿಲೇವಾರಿಗೆ ಸೂಚನೆ – DC ಡಾ.ಆರ್.ಸೆಲ್ವಮಣಿ
ಈ ಪತ್ರದಲ್ಲಿ ದಿನಾಂಕ 17-10-2022ರ ಸೋಮವಾರದಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ದಿನಾಂಕ 16-10-2022ರ ಭಾನುವಾರದಂದು ಸಂಜೆಯೊಳಗೆ ಬೆಂಗಳೂರಿಗೆ ಆಗಮಿಸುವಂತೆ ಸೂಚಿಸಿದ್ದಾರೆ.
ಇನ್ನೂ ದಿನಾಂಕ 17-10-2022ರ ಸೋಮವಾರದಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಶಾಸಕಾಂಗ ಪಕ್ಷದ ನಾಯಕರು, ವಿಪಕ್ಷ ನಾಯಕರಾದಂತ ಸಿದ್ಧರಾಮಯ್ಯ ಅವರಿಂದ ನಿರ್ದೇಶಿತನಾಗಿದ್ದೇನೆ ಎಂದಿದ್ದಾರೆ.
ಕರ್ನಾಟಕ ಮೂರು ಭಾಗ, 3 ಮುಖ್ಯಮಂತ್ರಿ, 3 ರಾಜ್ಯಪಾಲರು – ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ