ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಿಂದ ( Congress ) ದೇಶಾದ್ಯಂತ ನಡೆಸಲಾಗುತ್ತಿರುವಂತ ಭಾರತ್ ಜೋಡೋ ಯಾತ್ರೆ ( Bharat Jodo Yatra ) ಆರಂಭಗೊಂಡಿದೆ. ಇದೇ ವೇಳೆಯಲ್ಲಿ ಪುತ್ರ ರಾಹುಲ್ ಗಾಂಧಿಗೆ ( Rahul Gandhi ) ಸಾಥ್ ನೀಡೋದಕ್ಕಾಗಿ ಆಗಸ್ಟ್ 4ರಂದು ಕರ್ನಾಟಕಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ( Sonia Gandhi ) ಆಗಮಿಸಲಿದ್ದಾರೆ. ಇದಲ್ಲದೇ ಅ.6ರಂದು ಪುತ್ರನ ಜೊತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
ದೆಹಲಿಯಿಂದ ಅಕ್ಟೋಬರ್ 4ರಂದು ಬೆಳಿಗ್ಗೆ ಹೊರಡಲಿರುವಂತ ಸೋನಿಯಾ ಗಾಂಧಿಯವರು, ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಕ್ಟೋಬರ್ 4, 5ರಂದು ಕೊಡಗು ಭಾಗದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿರುವಂತ ಅವರು, ಕಾಂಗ್ರೆಸ್ ನಾಯಕರೊಂದಿಗೆ ಸಭೆ ಕೂಡ ನಡೆಸಲಿದ್ದಾರೆ.
ಅಕ್ಟೋಬರ್ 6ರಂದು ಸಾಂಕೇತಿಕವಾಗಿ ಪುತ್ರ ರಾಹುಲ್ ಗಾಂಧಿ ಜೊತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು, ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿರುವಂತ ಭಾರತ್ ಜೋಡೋ ಯಾತ್ರೆ ಮಹತ್ವ ಪಡೆದುಕೊಂಡಿದೆ.