ಬೆಂಗಳೂರು : ‘ಪೇ ಸಿಎಂ’ ಪೋಸ್ಟರ್ ವಿವಾದದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ.
ಹೌದು, ಹೌದು ಕಡೆ ಪೇ ಸಿಎಂ ಪೋಸ್ಟರ್ ವಿವಾದ ಭುಗಿಲೆದ್ದಿದೆ. ಇನ್ನೊಂದು ಕಡೆ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸಲು ಸಜ್ಜಾಗಿದೆ. ಇದರ ನಡುವೆ ಬಿಜೆಪಿ ಸರ್ಕಾರಕ್ಕೆ ಇನ್ನೊಂದು ರೀತಿಯಲ್ಲಿ ಮುಜುಗರ ತಂದೊಡ್ಡಲು ಕಾಂಗ್ರೆಸ್ ಸಿದ್ದವಾಗಿದೆ.
ಭಾರತ್ ಜೋಡೋ ಸಂದರ್ಭದಲ್ಲಿ ಈ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಚಾಮರಾಜನಗರ ಆ್ಯಕ್ಸಿಜನ್ ದುರಂತವನ್ನು ಸರ್ಕಾರದ ಮುಂದಿಡಲಿದೆ. ಸೆಪ್ಟೆಂಬರ್ 30 ರಂದು ಸಂವಾದ ಕಾರ್ಯಕ್ರಮ ನಡೆಯಲಿದೆ. ಪಾದಯಾತ್ರೆಯ ಬಿಡುವಿನ ಸಮಯದಲ್ಲಿ ಪಾದಯಾತ್ರೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ, ಚಾಮರಾಜನಗರ ಆ್ಯಕ್ಸಿಜನ್ ದುರಂತದಲ್ಲಿ 36 ಜನರು ಮೃತಪಟ್ಟಿದ್ದು, ಮೃತ ಕುಟುಂಬದವರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಡಿದ ಭ್ರಷ್ಟಾಚಾರವನ್ನು ಕೂಡ ಈ ವೇಳೆ ಪ್ರಸ್ತಾಪ ಮಾಡಲಾಗುತ್ತಿದೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರಿಗೆ ಸರ್ಕಾರದಿಂದ ಸರಿಯಾದ ಪರಿಹಾರ ಸಿಕ್ಕಿಲ್ಲ. ಈ ವಿಚಾರದ ಕುರಿತು ಮೃತ ಕುಟುಂಬದವರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
BREAKING NEWS : ʼ PFI ಸರ್ವೆ ಮುಗಿದ ಕೂಡಲೇ ಆಸ್ತಿ ಮುಟ್ಟುಗೋಲು ʼ : ಗೃಹ ಸಚಿವ ಅರಗ ಜ್ಞಾನೇಂದ್ರ ಸುಳಿವು