Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕತಾರ್‌ನಲ್ಲಿ ಮಾಜಿ ನೌಕಾ ಅಧಿಕಾರಿ ಬಂಧನ: ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ, ಪೂರ್ಣ ಬೆಂಬಲ ನೀಡುತ್ತೇವೆ ಎಂದ ಭಾರತ!

23/04/2026 9:20 PM

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮತದಾರರ ಅಭೂತಪೂರ್ವ ಉತ್ಸಾಹ, ದಾಖಲೆ ಬರೆದ ಮತದಾನ!

23/04/2026 9:20 PM

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ-ಪಾಕಿಸ್ತಾನ ದೋಸ್ತಿ: ‘ತಿಯಾಂಗಾಂಗ್’ ಗಗನಯಾನಕ್ಕೆ ಇಬ್ಬರು ಪಾಕ್ ಅಭ್ಯರ್ಥಿಗಳ ಆಯ್ಕೆ!

23/04/2026 8:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG BREAKING: ‘ವಿಪಕ್ಷ ನಾಯಕ ಆರ್.ಅಶೋಕ್’ ವಿರುದ್ಧ ‘ಭೂ ಹಗರಣ’ಗಳ ದಾಖಲೆ ಬಿಡುಗಡೆ ಮಾಡಿದ ‘ಕಾಂಗ್ರೆಸ್ ಸಚಿವ’ರು
KARNATAKA

BIG BREAKING: ‘ವಿಪಕ್ಷ ನಾಯಕ ಆರ್.ಅಶೋಕ್’ ವಿರುದ್ಧ ‘ಭೂ ಹಗರಣ’ಗಳ ದಾಖಲೆ ಬಿಡುಗಡೆ ಮಾಡಿದ ‘ಕಾಂಗ್ರೆಸ್ ಸಚಿವ’ರು

By kannadanewsnow0902/10/2024 7:02 PM

ಬೆಂಗಳೂರು: ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಹಗರಣಗಳ ದಾಖಲೆಯನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್, ಕೃಷ್ಣಬೈರೇಗೌಡ ಹಾಗೂ ಸಚಿವ ಹೆಚ್.ಕೆ ಪಾಟೀಲ್ ಅವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಚಿವರ ಜಂಟಿ ಮಾಧ್ಯಮಗೋಷ್ಠಿಯ ಮಾತನಾಡಿದಂತ ಗೃಹ ಸಚಿವ ಪರಮೇಶ್ವರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ ಎಂದರು.

ಲೊಟ್ಟೆ ಗೊಲ್ಲಹಳ್ಳಿ ಯಲ್ಲಿ ನೂರಾರು ಕೋಟಿ ಭೂ ಹಗರಣದ ಬಗ್ಗೆ ಇಂದು ದಾಖಲೆ ಸಮೇತ ಮುಂದೆ ಇಡುತ್ತೇವೆ. ಸರ್ವೇ ನಂಬರ್ 10/1, 10/11 F1 ಹಾಗೂ 10/11 F2 ಜಾಗದಲ್ಲಿ 32 ಗುಂಟೆ ಜಮೀನನ್ನು ಬಿಡಿಎ 24-02-1977 ರಲ್ಲಿ ಬಿಡಿಎ ನೋಟಿಫಿಕೇಶನ್ ಮಾಡುತ್ತದೆ. ದಿನಾಂಕ 27-2-1977 ರಲ್ಲಿ ಮತ್ತೊಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ. 31-8-1978 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನಂತರ 26-02-2003 ಹಾಗೂ 2007 ರಲ್ಲಿ ಜಮೀನಿನ ಮೂಲ ಮಾಲೀಕರಾದ ರಾಮಸ್ವಾಮಿ ಅವರಿಂದ ಆರ್ ಅಶೋಕ್ ಅವರು ಈ ಜಮೀನನ್ನ ಶುದ್ಧ ಕ್ರಯದ ಮೂಲಕ ಖರೀದಿ ಮಾಡುತ್ತಾರೆ ಎಂದರು.

ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಈ ಅರ್ಜಿಯ ಮೇಲೆ ಕೂಡಲೇ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಕಡತ ಮಂಡನೆಯಾದ ಎರಡು ತಿಂಗಳಲ್ಲಿ ಭೂಸ್ವಾಧೀನ ಕೈಬಿಡಲಾಗುತ್ತದೆ. ಡಿನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್. ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 27-08-2011ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ ಎಂದು ಹೇಳಿದರು.

ನಂತರ ಹೈಕೋರ್ಟ್ ಮೆಟ್ಟಿಲೇರಿ ನಂತರ ನ್ಯಾಯಾಧೀಶರಾದ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರು ವಿಚಾರಣೆ ಮಾಡಿ ತೀರ್ಪು ನೀಡುತ್ತಾರೆ. ಈ ತೀರ್ಪಿನಲ್ಲಿ ಈ ಭೂಮಿಯು ಬಿಡಿಎ ಅಧೀನದಲ್ಲಿರುವ ಕಾರಣ ಕ್ರಿಮಿನಲ್ ಮೊಕದ್ದಮೆ ಹೂಡುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗುತ್ತದೆ. ಸಿದ್ದರಾಮಯ್ಯ ಅವರ ಪತ್ನಿ ತಮಗೆ ಪರಿಹಾರವಾಗಿ ಬಂದ ನಿವೇಶನ ವಾಪಸ್ ನೀಡಿರುವುದಕ್ಕೆ ನೀವು ಆಡುತ್ತಿರುವ ಮಾತುಗಳು ಹಾಗೂ ಈ ತೀರ್ಪನ್ನು ನೀವು ಯಾವ ರೀತಿ ಅರ್ಥೈಸುತ್ತೀರಿ? ಇದರ ಬಗ್ಗೆ ಜನರಿಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.

ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ ಆರ್ ಅಶೋಕ್ ಅವರ ಹೇಳಿಕೆ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಿಡಿಎ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡು ನಂತರ ಬಿಡಿಎಗೆ ವಾಪಸ್ ನೀಡಿರುವವರು ತಮ್ಮ ಅನುಭವದ ಮಾತನ್ನು ಈಗ ಆಡುತ್ತಿದ್ದಾರೆ. ನೀವು ಮಾಡಿದ್ದು ಸರಿಯಾದರೆ, ಪಾರ್ವತಮ್ಮ ಅವರು ಮಾಡಿದ್ದರಲ್ಲಿ ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ತಪ್ಪು ಹೇರಿ, ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು ಎಂದರು.

ನೀವು ನಿಮ್ಮದಲ್ಲದ ಭೂಮಿಯನ್ನು ಬಿಡಿಎಗೆ ಹಿಂಪಡೆಯುತ್ತೀರಿ, ಮೂಡಾ ಸಂಸ್ಥೆಯಿಂದ ಪರಿಹಾರವಾಗಿ ಬಂದ ಶ್ರೀಮತಿ ಪಾರ್ವತಿಯವರು ಹಿಂದಿರುಗಿಸಿದರೆ ಅದನ್ನು ತಪ್ಪು ಎನ್ನುತ್ತೀರಾ? ಎಂದು ಪ್ರಶ್ನಿಸಿದರು.

ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಈ ಜಾಗ ಡಾಲರ್ಸ್ ಕಾಲೋನಿ 2ನೆ ಹಂತದ ಆರ್ ಎಂ ವಿ ಬಡಾವಣೆ ಹಾಗೂ ವರ್ತುಲ ರಸ್ತೆ ಬಳಿ ಇದೆ. ಈ ಪ್ರದೇಶವನ್ನು ಬಿಡಿಎ 1977 ಹಾಗೂ 1978ರಲ್ಲಿ ವಶಕ್ಕೆ ಪಡೆದಿತ್ತು. ಈ ಜಾಗ ವರ್ತುಲ ರಸ್ತೆಗೆ ಮುಖವಾಗಿದೆ. ಹೀಗಾಗಿ ಈ ಜಮೀನಿನ ಮೌಲ್ಯ ಕೋಟ್ಯಂತರ ರೂಪಾಯಿಯಾಗಿದೆ. 2003ರಲ್ಲಿ ಆರ್ ಅಶೋಕ್ ಅವರು ಶುದ್ಧ ಕ್ರಯ ಹೇಗೆ ಮಾಡಿಕೊಂಡರು? ಇಷ್ಟು ದಿನ ಅಕ್ರಮವಾಗಿ ಜಿಪಿಎ ಮಾಡಿಕೊಂಡಿರುವುದನ್ನು ಕೇಳಿದ್ದೆ, ಆದರೆ ಮೊದಲ ಬಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಶುದ್ಧ ಕ್ರಯ ಮಾಡಿಕೊಂಡಿರುವ ಪ್ರಕರಣ ನೋಡುತ್ತಿದ್ದೇನೆ. ಬಿಡಿಎ ಸ್ವತ್ತನ್ನು ಖಾಸಗಿ ಅವರಿಂದ ಹೇಗೆ ಖರೀದಿ ಮಾಡಿದರು? ಬಿಡಿಎ ಬಳಿ ಖಾತಾ ಇರುವಾಗ ಗುಳ್ಳಮ್ಮ ಅವರ ವಾರಸುದಾರರಿಂದ ಹೇಗೆ ಖರೀದಿ ಮಾಡಿದರು? ಎಂದು ಕೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮಸ್ವಾಮಿ ಬಿನ್ ವೆಂಕಟಪ್ಪ ಎಂಬುವಬರ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಬೇಕು ಎಂದು ಅರ್ಜಿ ನೀಡುತ್ತಾರೆ. 18-11-2009ರಂದು ಆಗಿನ ಸಿಎಂ ಯಡಿಯೂರಪ್ಪ ಅವರು ಬಿಡಿಎ ಆಯುಕ್ತರು ಕೂಡಲೇ ಕಡತದಲ್ಲಿ ಮಂಡಿಸಿ ಎಂದು ಬರೆಯುತ್ತಾರೆ. ನಂತರ ಅದೇ ವರ್ಷ ಡಿಸೆಂಬರ್ 31ಕ್ಕೆ ಅಂದರೆ ಒಂದು ತಿಂಗಳು 12 ದಿನಗಳ ಅಂತರದಲ್ಲಿ ಡಿನೋಟಿಫಿಕೇಷನ್ ಮಾಡುತ್ತಾರೆ. ಸರ್ಕಾರಿ ಜಾಗವನ್ನು 23 ವರ್ಷಗಳ ನಂತರ ಡಿನೋಟಿಫಿಕೇಷನ್ ಮಾಡಿರುವುದು ಅಕ್ರಮ ಅಲ್ಲವೇ? ಎಂದು ಪ್ರಶ್ನಿಸಿದರು.

ಶುದ್ಧ ಕ್ರಯ ಪತ್ರದಲ್ಲಿ ಗುಳ್ಳಮ್ಮ ಎಂಬುವವರ ವಾರಸುದಾರರು ಯಾರು ಎಂದು ನೋಡಿದರೆ, ವಾರಸುದಾರರು ಜಿ.ಶಾಮಣ್ಣ, ಜಿ.ಮುನಿರಾಜು, ಜಿ.ಗೋವಿಂದಪ್ಪ, ಜಿ.ಕಾಂತರಾಜು, ಜಿ. ಸುಬ್ರಮಣ್ಯ ಎಂದು ಇದೆ. ಇಲ್ಲಿ ರಾಮಸ್ವಾಮಿ ಹಾಗೂ ವೆಂಕಟಪ್ಪ ಎಂಬುವವರಿಗೆ ಗುಳ್ಳಮ್ಮ ಎಂಬುವವರು ಹೇಗೆ ಸಂಬಂಧ ಎಂದು ಗೊತ್ತಿಲ್ಲ. ನನ್ನ ಪ್ರಕಾರ ರಾಮಸ್ವಾಮಿ ದಾರಿಯಲ್ಲಿ ಹೋಗುವ ದಾಸಯ್ಯ ಎಂದು ನನಗೆ ಮೇಲ್ನೋಟಕ್ಕೆ ಕಾಣುತ್ತಿದೆ. ದಾರಿಯಲ್ಲಿ ಹೋಗುವವರಿಂದ ಅರ್ಜಿ ಪಡೆದು ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಡೈನೋಟಿಫೈ ಮಾಡುತ್ತೀರಿ. ಈ ಬೇನಾಮಿ ರಾಮಸ್ವಾಮಿ ಎಲ್ಲಿಂದ ಬಂದ? ಎಂದರು.

ಅಲ್ಲಿಗೆ ಮೂಲ ವಾರಸುದಾರರು ಡಿನೋಟಿಫಿಕೇಷನ್ ಗೆ ಅರ್ಜಿಯನ್ನೇ ಕೊಟ್ಟಿಲ್ಲ.ಇವರ ಹೆಸರಲ್ಲಿ ಬೇನಾಮಿ ರಾಮಸ್ವಾಮಿ ಎಂಬುವವರನ್ನು ಸೃಷ್ಟಿ ಮಾಡಲಾಗಿದೆ. ಇದು ಕ್ರಮವೇ? ಅಕ್ರಮವೇ? ಎಂದು ಪ್ರಶ್ನಿಸಿದರು.

ಅಂತಿಮವಾಗಿ ಡಿನೋಟಿಫಿಕೇಷನ್ ಆಗಿದ್ದು ಮುನಿಸ್ವಾಮಪ್ಪ ಬಿನ್ ದೊಡ್ಡಪಿಳ್ಳಪ್ಪ ಎಂಬುವವರಿಗೆ. ಈ ಮುನಿಸ್ವಾಮಪ್ಪ ಬಿನ್ ದೊಡ್ಡಪಿಳ್ಳಪ್ಪ ಎಂಬುವವರು ಯಾರು? ಇನ್ನು ಅಂತಿಮವಾಗಿ ಖಾತೆ ಆಗುವುದು ಆರ್.ಅಶೋಕ್ ಅವರ ಹೆಸರಿಗೆ. ಹೆಜ್ಜೆ ಹೆಜ್ಜೆಗೂ ಅಕ್ರಮ ಮಾಡಿರುವ ಅಶೋಕ್ ಅವರು ಇಂದು ಆಡುತ್ತಿರುವ ಮಾತುಗಳು ನೋಡಿದರೆ ಅಚ್ಚರಿಯಾಗುತ್ತದೆ. ಯಾವುದೇ ತಪ್ಪು ಮಾಡಿಲ್ಲದಿದ್ದರೂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಿ, ಬಿಜೆಪಿಯ ಅಸ್ತ್ರದಂತೆ ಇರುವ ಇಡಿ ಸಂಸ್ಥೆಯನ್ನು ಪ್ರಯೋಗಿಸುತ್ತಾರೆ. ಹೀಗಾಗಿ ಇಷ್ಟೆಲ್ಲಾ ಅಕ್ರಮ ಮಾಡಿರುವ ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಕೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಅವರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆಯಿಂದ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಆಚರಣೆ

ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಬಿಸಿಲಿನ ಶಾಖದ ಮುನ್ನೆಚ್ಚರಿಕೆ: ನಿಗಮದಿಂದ ಆರೋಗ್ಯ ಮಾರ್ಗಸೂಚಿ ಪ್ರಕಟ

23/04/2026 8:26 PM2 Mins Read

ರಾಜ್ಯ ಸರ್ಕಾರದ ‘ಗ್ರೇಡ್ ಆಸೆ’ಗೆ ಬಿದ್ದ 9,481 ವಿದ್ಯಾರ್ಥಿಗಳು ‘SSLC ಹಿಂದಿ ಪರೀಕ್ಷೆ’ಯಲ್ಲಿ ಫೇಲ್!

23/04/2026 8:00 PM2 Mins Read

GOOD NEWS: ಪೊಲೀಸ್ ಇಲಾಖೆಯ 215 ನೌಕರರಿಗೆ ‘ಹಳೆಯ ಪಿಂಚಣಿ’ ಭಾಗ್ಯ: ರಾಜ್ಯ ಸರ್ಕಾರದ ಮಹತ್ವದ ಆದೇಶ

23/04/2026 7:36 PM2 Mins Read
Recent News

ಕತಾರ್‌ನಲ್ಲಿ ಮಾಜಿ ನೌಕಾ ಅಧಿಕಾರಿ ಬಂಧನ: ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ, ಪೂರ್ಣ ಬೆಂಬಲ ನೀಡುತ್ತೇವೆ ಎಂದ ಭಾರತ!

23/04/2026 9:20 PM

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮತದಾರರ ಅಭೂತಪೂರ್ವ ಉತ್ಸಾಹ, ದಾಖಲೆ ಬರೆದ ಮತದಾನ!

23/04/2026 9:20 PM

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ-ಪಾಕಿಸ್ತಾನ ದೋಸ್ತಿ: ‘ತಿಯಾಂಗಾಂಗ್’ ಗಗನಯಾನಕ್ಕೆ ಇಬ್ಬರು ಪಾಕ್ ಅಭ್ಯರ್ಥಿಗಳ ಆಯ್ಕೆ!

23/04/2026 8:51 PM

ಚುನಾವಣಾ ಮಹಾಸಮರ: ಪಶ್ಚಿಮ ಬಂಗಾಳದಲ್ಲಿ ದಾಖಲೆಯ ಶೇ. 92.03ರಷ್ಟು ಮತದಾನ; ತಮಿಳುನಾಡಿನಲ್ಲೂ ಶೇ. 84.87ರಷ್ಟು ಭರ್ಜರಿ ವೋಟಿಂಗ್!

23/04/2026 8:40 PM
State News
KARNATAKA

ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಬಿಸಿಲಿನ ಶಾಖದ ಮುನ್ನೆಚ್ಚರಿಕೆ: ನಿಗಮದಿಂದ ಆರೋಗ್ಯ ಮಾರ್ಗಸೂಚಿ ಪ್ರಕಟ

By kannadanewsnow0923/04/2026 8:26 PM KARNATAKA 2 Mins Read

ಬೆಂಗಳೂರು: ಕರ್ನಾಟಕದಲ್ಲಿ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸುಡುವ ಬೇಸಿಗೆಯಲ್ಲಿ ಹಗಲಿರುಳು ರಸ್ತೆಯಲ್ಲೇ ಕಾಲ ಕಳೆಯುವ ಕೆ.ಎಸ್.ಆರ್.ಟಿ.ಸಿ…

ರಾಜ್ಯ ಸರ್ಕಾರದ ‘ಗ್ರೇಡ್ ಆಸೆ’ಗೆ ಬಿದ್ದ 9,481 ವಿದ್ಯಾರ್ಥಿಗಳು ‘SSLC ಹಿಂದಿ ಪರೀಕ್ಷೆ’ಯಲ್ಲಿ ಫೇಲ್!

23/04/2026 8:00 PM

GOOD NEWS: ಪೊಲೀಸ್ ಇಲಾಖೆಯ 215 ನೌಕರರಿಗೆ ‘ಹಳೆಯ ಪಿಂಚಣಿ’ ಭಾಗ್ಯ: ರಾಜ್ಯ ಸರ್ಕಾರದ ಮಹತ್ವದ ಆದೇಶ

23/04/2026 7:36 PM

ಧಾರ್ಮಿಕ ಆಚರಣೆ ಸಹಬಾಳ್ವೆಗೆ ಸಹಕಾರಿ: ಮದ್ದೂರು ಶಾಸಕ ಕೆ.ಎಂ‌.ಉದಯ್

23/04/2026 6:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.