ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಪೌರಾಯುಕ್ತೆಗೆ ಜೀವ ಬೆದರಿಕೆ ಕೇಸ್ ಗೆ ಸಬಂಧಪಟ್ಟಂತೆ ರಾಜೀವ್ ಗೌಡ ಮಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ. ಕೇರಳಕ್ಕೆ ತೆರಳುತ್ತಿದ್ದ ಕಾರನ್ನು ನಾವು ಚೇಸ್ ಮಾಡಿದೆವು ಕಾರಣ ಟ್ರ್ಯಾಕ್ ಮಾಡಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ರಾಜೀವ್ ಗೌಡ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಆದರೆ ರಾಜೇಗೌಡ ಪತ್ನಿ ತನಿಖೆಗೆ ಸಹಕರಿಸಿರಲಿಲ್ಲ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಹೇಳಿದ್ದಾರೆ.
ರಾಜೀವ ಗೌಡ ಜೊತೆಗೆ ಇದ್ದ ಮೈಕಲ್ಲನ್ನು ಸಹ ರೆಸ್ಟ್ ಮಾಡಲಾಗಿದೆ ಆರೋಪಿ ಬಂಧನಕ್ಕೆ ಮೂರು ಪೊಲೀಸರ ತಂಡವನ್ನು ರಚಿಸಲಾಗಿತ್ತು. ವಿವಿಧ ಜಿಲ್ಲೆಗಳ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಲಾಗಿತ್ತು ಮಂಗಳೂರುನಿಂದ ಕೆರಳಕ್ಕೆ ಹೋಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. KA03 MAX 9108 ನಂಬರ್ ಕಾರಿನಲ್ಲಿ ರಾಜಿವ್ ಗೌಡ ಪರಾರಿಯಾಗಿದ್ದ.
ರಾಜೀವ್ ಗೌಡ ಕಾರನ್ನು ಫಾಲೋ ಮಾಡಿ ಇಬ್ಬರನ್ನು ಬಂಧಿಸಲಾಗಿದೆ ಪೊಲೀಸರಿಂದ ಯಾವುದೇ ವಿಷಯಗಳು ಮಾಹಿತಿ ಸೋರಿಕೆ ಆಗಿಲ್ಲ. ನಮ್ಮ ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಪೊಲೀಸರಿಂದ ಯಾವುದೇ ನಿರ್ಲಕ್ಷ ಆಗಿಲ್ಲ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ ಚೌಕ್ಸೆ ಹೇಳಿಕೆ ನೀಡಿದರು.








