ಬೆಂಗಳೂರು : ಮಾಜಿ ಸಚಿವರ ಪುತ್ರನಿಗೆ ಹನಿಟ್ರ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಪಟ್ಟಂತೆ ಕಾಂಗ್ರೆಸ್ ನಾಯಕಿಯ ಬಂಧನವಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಮಂಜುಳಾ ಪಾಟೀಲ್ ಳನ್ನು ಇದೀಗ ಬಂಧಿಸಲಾಗಿದೆ.
ಬಂಧಿತ ಮಂಜುಳಾ ಪಾಟೀಲ್ ಳನ್ನು ನಲಪಾಡ್ ಬ್ರಿಗೇಡ್ ನ ಕಲಬುರ್ಗಿ ಘಟಕದ ಅಧ್ಯಕ್ಷೆ ಎಂದು ಹೇಳಲಾಗುತ್ತಿದೆ. ಮಾಜಿ ಸಚಿವರ ಪುತ್ರನಿಗೆ ವಾಟ್ಸಪ್ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಕಾಂಗ್ರೆಸ್ನ ಮಾಜಿ ಮಂತ್ರಿ ಪುತ್ರನಿಗೆ ಖೆಡ್ಡ ತೋಡಿ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ.
ಈ ವೇಳೆ ಹನಿಟ್ರ್ಯಾಪ್ ವಿಚಾರ ಕೇಳಿ ಮಂಜುಳಾಗೆ ಮಾಜಿ ಸಚಿವರ ಪುತ್ರ ಉಲ್ಟಾ ಹೊಡೆದು ಖೆಡ್ಡ ತೋಡಿದ್ದ. 20 ಲಕ್ಷ ಆಗಲ್ಲ ಕಡಿಮೆ ಮಾಡಿ ಅಂತ ಮಾಜಿ ಸಚಿವರ ಪುತ್ರ ಹೇಳಿದ್ದ. ಅದಕ್ಕೆ ಮಂಜುಳ 20 ಲಕ್ಷದಲ್ಲಿ ನಯಾ ಪೈಸೆ ಸಹ ಕಡಿಮೆ ಆಗಲ್ಲ ಎಂದು ಹೇಳಿದ್ದಳು. ಇದೀಗ 20 ಲಕ್ಷ ಹಣ ಪಡೆಯುವಾಗ ಮಂಜುಳಾ ಪಾಟೀಲ್ ಸಿಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಗಿ ಬಿದ್ದಿದ್ದಾಳೆ.
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ಅರೆಸ್ಟ್ ಮಾಡಲಾಗಿದೆ. ಹನಿ ಟ್ರಾಪರ್ ಮಂಜುಳಾ ಆಕೆಯ ಪತಿಯ ಬಂಧನವಾಗಿದೆ. ಮೊದಲಿಗೆ ವಾಟ್ಸಪ್ ನಲ್ಲಿ ಸೆಕ್ಸ್ ಚಾಟ್ ಮಾಡಿದ ಮಂಜುಳಾ ಪಾಟೀಲ್ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಗೆ ಮುಂದಾಗಿದ್ದಳು ಎನ್ನಲಾಗಿದೆ. ಬಳಿಕ ವಿಡಿಯೋ ಹಾಗೂ ಫೋಟೋ ಕಳುಹಿಸಿ ಇಪ್ಪತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು. ಇದೀಗ 20 ಲಕ್ಷ ಪಡೆಯುವಾಗ ಸಿಸಿಬಿ ಪೊಲೀಸರಿಗೆ ಸಿಗಿ ಬಿದ್ದಿದ್ದಾಳೆ.