ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ನಿನ್ನೆ ಸುದ್ಧಿಗೋಷ್ಠಿ ಕಾಂಗ್ರೆಸ್ ಮುಖಂಡ ಕೆ.ಮುಕುಡಪ್ಪ ಅವಾಚ್ಯ ಪದ ಬಳಕೆ ಮಾಡಿದ್ದರು. ಇಂದು ನಾನು ಟಗರು ಸೂ..ಮಗಂದು ಬಲು ಗಟ್ಟಿ ಅಂದಿದ್ದು ನಿಜ. ಇದರಿಂದ ಸಿದ್ಧರಾಮಯ್ಯ ಅವರಿಗೆ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದು ಕ್ಷಮೆಯನ್ನು ಕೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಕುರುಬ ಸಮುದಾಯದ ಮುಖಂಡ ಕೆ.ಮುಕುಡಪ್ಪ, ನಾನು ಮತ್ತು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡುತ್ತಿದ್ದೆವು. ಬೊಮ್ಮಾಯಿ 20 ಕುರಿ ಹಾಗೂ ಒಂದು ಟಗರು ನೀಡುವ ಯೋಜನೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ವೇಳೆ ಒಂದೇ ಟಗರು 20ಕುರಿಗಳನ್ನು ನೋಡಿಕೊಳ್ಳುತ್ತೆ. ಟಗರು ಸೂ..ಮಗಂದು ಬಲು ಗಟ್ಟಿ ಅಂದಿದ್ದು ನಿಜ ಎಂದಿದ್ದಾರೆ.
BREAKING NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಬಂಧಿತ ಆರೋಪಿ ಅಮೃತ್ ಪೌಲ್ ನಿವಾಸದ ಮೇಲೆ ಇಡಿ ದಾಳಿ
ಇನ್ನೂ ನಾನು ಟಗರು ಬಗ್ಗೆ ಮಾತನಾಡಿದ್ದೇನೆ ವಿನಹ ಸಿದ್ಧರಾಮಯ್ಯ ಬಗ್ಗೆ ಮಾತನಾಡಿಲ್ಲ. ಆದರೆ ಸಿದ್ದರಾಮಯ್ಯ ಬಗ್ಗೆ ಆ ಪದ ಹೇಳಿದ್ದೇನೆ ಎಂದು ಬಿಂಬಿಸಲಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವೆ. ಸಿದ್ದರಾಮಯ್ಯ ಅವರು ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ನಾನೂ ಆ ಸಂದರ್ಭದಲ್ಲಿ ಅವರ ಜೊತೆ ಇದ್ದೆ ಎಂದು ಹೇಳುವ ಮೂಲಕ ನಿನ್ನೆ ಘಟನೆ ಬಗ್ಗೆ ಕೆ.ಮುಕುಡಪ್ಪ ವಿಷಾದ ವ್ಯಕ್ತ ಪಡಿಸಿದರು.