ಭೋಪಾಲ್: ʻಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿʼ ಎಂಬ ವಿವಾದತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರನ್ನು ಮಂಗಳವಾರ(ಇಂದು)ಬಂಧಿಸಲಾಗಿದೆ.
ಸೋಮವಾರ ಪಟೇರಿಯಾ ಅವರು ʻಸಂವಿಧಾನವನ್ನು ಉಳಿಸಲು ಪಿಎಂ ಮೋದಿಯನ್ನು ಕೊಲ್ಲಲು ಸಿದ್ಧರಾಗಿʼ ಎಂದು ಜನರ ಗುಂಪನ್ನು ಪ್ರೇರೇಪಿಸುತ್ತಿರುವ ವೀಡಿಯೊ ವೈರಲ್ ಆದ ನಂತ್ರ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.
ವೈರಲ್ ವೀಡಿಯೊದಲ್ಲಿ, ಪಟೇರಿಯಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ, “ಮೋದಿ ಚುನಾವಣೆಯನ್ನು ಕೊನೆಗೊಳಿಸುತ್ತಾರೆ. ಮೋದಿ ಧರ್ಮ, ಜಾತಿ, ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತರ ಜೀವನ ಅಪಾಯದಲ್ಲಿದೆ. ಸಂವಿಧಾನವನ್ನು ಉಳಿಸಬೇಕು. ಹೀಗಾಗಿ, ಮೋದಿಯನ್ನು ಕೊಲ್ಲಲು ಸಿದ್ಧರಾಗಿʼ ಎಂದಿದ್ದರು.
Congress leader & former minister Raja Pateria incites people to kill PM Modi – earlier too Cong leaders spoke about death of PM Modi (Sheikh Hussain)
But now a death threat!
After “Aukat dikha denge” “Raavan” this is Rahul Gandhi’s Pyaar ki Rajniti? Will they act on him? No! pic.twitter.com/wH6LSi63g2
— Shehzad Jai Hind (@Shehzad_Ind) December 12, 2022
ವಿಡಿಯೋ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಾಂಗ್ರೆಸ್ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿದ್ದರು.
ಪನ್ನಾದ ಪಾವಾಯಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ ಪಟೇರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಪಟೇರಿಯಾ ಅವರನ್ನು ರಾಜ್ಯದ ದಾಮೋಹ್ ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ.
BIGG NEWS : 5 ವರ್ಷದ ಬಾಲಕಿಗೆ ‘ಝಿಕಾ ವೈರಸ್’ ಪತ್ತೆ : ರಾಯಚೂರಿನಲ್ಲಿ ‘ಹೈ ಅಲರ್ಟ್’
BIGG NEWS : 5 ವರ್ಷದ ಬಾಲಕಿಗೆ ‘ಝಿಕಾ ವೈರಸ್’ ಪತ್ತೆ : ರಾಯಚೂರಿನಲ್ಲಿ ‘ಹೈ ಅಲರ್ಟ್’