ಬೆಂಗಳೂರು: ಕ್ಷೀರ ಭಾಗ್ಯ ಹಾಲಿನ ಪುಡಿ ಕಳ್ಳ ಸಾಗಣೆಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಕ್ಷೀರ ಭಾಗ್ಯ ಹಾಲಿನ ಪುಡಿ ಕಳ್ಳಸಾಗಣೆ: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ” ರಾಜ್ಯದ ಮಕ್ಕಳ ಪೋಷಣೆಗೆ ಮೀಸಲಾಗಿದ್ದ 18.14 ಲಕ್ಷ ಮೌಲ್ಯದ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಜಪ್ತಿ ಮಾಡಲಾಗಿದೆ. ಇದರಿಂದ ಸರ್ಕಾರದ ಮಕ್ಕಳ ಪೋಷಣಾ ಯೋಜನೆಗಳ ಸುರಕ್ಷತೆ ಪ್ರಕ್ರಿಯೆಯ ಮೇಲೆ ದೊಡ್ಡ ಪ್ರಶ್ನೆ ಹುಟ್ಟಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳದ ಸಿದ್ಧರಾಮಯ್ಯ ಅವರ ನಿರ್ದಿಷ್ಟ ದೃಷ್ಟಿಯ ಕಾರಣ ಇಂತಹ ಕಳ್ಳಸಾಗಣೆಗಳು ನಡೆಯುತ್ತಿವೆ. ರಾಜ್ಯದ ನೂತನ ಮಕ್ಕಳ ಪೋಷಣಾ ಯೋಜನೆಗಳನ್ನು ಈ ರೀತಿಯ ಕೃತ್ಯಗಳಿಂದ ಹಾಳುಮಾಡಲು ಅವಕಾಶ ಕೊಟ್ಟಿರುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತಿದೆ ಎಂದಿದ್ದಾರೆ.
ಮಾನ್ಯ ಸಿದ್ದರಾಮಯ್ಯರವರ ಆಡಳಿತದಲ್ಲಿ ಮಕ್ಕಳ ಪೋಷಣೆಗೆ ಮೀಸಲಾಗಿದ್ದ ಸಂಪತ್ತು ಕಳ್ಳಸಾಗಣೆ ಮಾಡುವ ಮಟ್ಟಿಗೆ ಬಿದ್ದಿದ್ದು, ಸರ್ಕಾರವು ತಕ್ಷಣ ಜವಾಬ್ದಾರಿ ಹೊತ್ತು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಮಕ್ಕಳ ಹಕ್ಕುಗಳ ಮೇಲೆ ಕಾಂಗ್ರೆಸ್ ಸರ್ಕಾರ ಹೇರಿದ ಮತ್ತೊಂದು ಆಘಾತ ಎಂಬುದು ಸ್ಪಷ್ಟವಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
"ಕ್ಷೀರ ಭಾಗ್ಯ ಹಾಲಿನ ಪುಡಿ ಕಳ್ಳಸಾಗಣೆ: ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ"
ರಾಜ್ಯದ ಮಕ್ಕಳ ಪೋಷಣೆಗೆ ಮೀಸಲಾಗಿದ್ದ 18.14 ಲಕ್ಷ ಮೌಲ್ಯದ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಜಪ್ತಿ ಮಾಡಲಾಗಿದೆ. ಇದರಿಂದ ಸರ್ಕಾರದ ಮಕ್ಕಳ ಪೋಷಣಾ ಯೋಜನೆಗಳ ಸುರಕ್ಷತೆ ಪ್ರಕ್ರಿಯೆಯ ಮೇಲೆ… pic.twitter.com/7ZadfFbJoF
— Chalavadi Narayanaswamy (@NswamyChalavadi) October 5, 2024
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್