ಬೆಂಗಳೂರು: ಮಳೆ ಅವಾಂತರದಿಂದಾಗಿ ಬೆಂಗಳೂರು ( Bengaluru Rain ) ಜನತೆ ತತ್ತರಿಸಿ ಹೋಗಿದ್ದಾರೆ. ಅನೇಕ ಕಡೆಗಳಲ್ಲಿ ಜಲಾವೃತಗೊಂಡು ರಸ್ತೆ, ಮನೆಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ( Congress Party ) ಬೆಟರ್ ಬೆಂಗಳೂರು ಕ್ರಿಯಾ ಯೋಜನೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೇ ಈ ಸಮಿತಿ ನೀಡುವಂತ ವರದಿಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಕಾರ್ಯಗತ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಜೀವ ಬೆದರಿಕೆ ಹಾಕಿದ ಹತ್ಯೆ ಆರೋಪಿಯ ಸಹೋದರ ಅರೆಸ್ಟ್
ಈ ಸಂಬಂಧ ಟ್ವಿಟ್ ಮಾಡಿರುವಂತ ಅವರು, ಈ ಹಿಂದೆ ಹೇಳಿದಂತೆ ನಮ್ಮ ಬೆಂಗಳೂರಿನ ಹಿರಿಮೆ ಮರಳಿ ಪಡೆಯುವ ನಿಟ್ಟಿನಲ್ಲಿ ಶ್ರೀ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ‘ಬೆಟರ್ ಬೆಂಗಳೂರು’ ಎನ್ನುವ ಕ್ರಿಯಾ ಸಮಿತಿಯನ್ನು ರಚಿಸಿದ್ದೇನೆ. ಈ ಸಮಿತಿಯು 20 ದಿನಗಳೊಳಗೆ ವರದಿಯನ್ನು ನೀಡಲಿದೆ. ಇದರ ಆಧಾರದ ಮೇಲೆ ಅಧಿಕಾರಕ್ಕೆ ಬಂದ ತಕ್ಷಣ ಕಾರ್ಯಗತಗೊಳ್ಳುವ ದೂರದೃಷ್ಟಿಯ ಯೋಜನೆ ರೂಪಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಈ ಹಿಂದೆ ಹೇಳಿದಂತೆ ನಮ್ಮ ಬೆಂಗಳೂರಿನ ಹಿರಿಮೆ ಮರಳಿ ಪಡೆಯುವ ನಿಟ್ಟಿನಲ್ಲಿ ಶ್ರೀ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ 'ಬೆಟರ್ ಬೆಂಗಳೂರು' ಎನ್ನುವ ಕ್ರಿಯಾ ಸಮಿತಿಯನ್ನು ರಚಿಸಿದ್ದೇನೆ. ಈ ಸಮಿತಿಯು 20 ದಿನಗಳೊಳಗೆ ವರದಿಯನ್ನು ನೀಡಲಿದೆ. ಇದರ ಆಧಾರದ ಮೇಲೆ ಅಧಿಕಾರಕ್ಕೆ ಬಂದ ತಕ್ಷಣ ಕಾರ್ಯಗತಗೊಳ್ಳುವ ದೂರದೃಷ್ಟಿಯ ಯೋಜನೆ ರೂಪಿಸುತ್ತೇವೆ. pic.twitter.com/orGRBpxnPk
— DK Shivakumar (@DKShivakumar) September 11, 2022
ಅಂದಹಾಗೇ ಕೆಪಿಸಿಸಿಯಿಂದ ರಚಿಸಲಾಗಿರುವಂತ ಬೆಟರ್ ಬೆಂಗಳೂರು ಕ್ರಿಯಾ ಸಮಿತಿಯ ಅಧ್ಯಕ್ಷರನ್ನಾಗಿ ರಾಮಲಿಂಗಾರೆಡ್ಡಿ ನೇಮಿಸಲಾಗಿದೆ. ಇನ್ನುಳಿದಂತೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಚಿವ ಕೆ.ಜೆ ಜಾರ್ಜ್, ಕೃಷ್ಣಭೈರೇಗೌಡ, ಎನ್ ಎ ಹ್ಯಾರಿಸ್, ರಿಜ್ವಾನ್ ಹರ್ಷದ್, ಮಾಜಿ ಬಿಬಿಎಂಪಿ ಮೇಯರ್ ಜಿ ಪದ್ಮಾವತಿ, ಗಂಗಾಂಬಿಕೆ ಹಾಗೂ ಮಾಜಿ ಎಂಪಿ ರಾಜೀವ್ ಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.