ಉಡುಪಿ: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ( Former minister Bt Lalitha Nayak ) ಅವರು ದೈವ ನರ್ತಕರು ನಾಟಕ ಮಾಡುತ್ತಾರೆ ಎಂಬುದಾಗಿ ಹೇಳುವ ಮೂಲಕ, ದೈವಾರಾಧನೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ದೈವಾರಾಧನೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಾಗಿದೆ.
ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ?
ರಾಜ್ಯ ಸರ್ಕಾರದ ವಿರುದ್ಧ ಕಾಂತಾರ ಚಿತ್ರದ ಬಳಿಕ ದೈವ ನರ್ತಕರಿಗೆ ರೂ.2,000 ಗೌರವ ಧನವನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ಸರ್ಕಾರದ ಈ ನಡೆಯನ್ನು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಖಂಡಿಸಿದ್ದರು. ಅಲ್ಲದೇ ಇದು ಮೂಡನಂಬಿಕೆಗೆ ಇಂಬು ಕೊಡುತ್ತದೆ ಎಂಬುದಾಗಿ ಹೇಳಿದ್ದರು.
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಎರಡನೇ ಸ್ಥಾನದಲ್ಲಿ ಕರ್ನಾಟಕ
ಇದಷ್ಟೇ ಅಲ್ಲದೇ ದೈವ ನರ್ತಕರು ಮೈಮೇಲೆ ದೈವ ಬಂದಂತೆ ನಾಟಕವಾಡುತ್ತಿದ್ದಾರೆ. ದೈವ ಬಂದಾಕ್ಷಣ ಓ ಅಂತ ಕೂಗುವುದು ಮನುಷ್ಯನ ಆಕ್ರೋಶವಷ್ಟೇ. ಇದರ ಹಿಂದೆ ಯಾವುದೇ ದೈವಿಕ ಶಕ್ತಿಯಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು.
ಈ ಬಾರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧೆ? ಈ ಕುರಿತು ಹೇಳಿದ್ದೇನು ಗೊತ್ತಾ?
ಮಾಜಿ ಸಚಿವೆಯ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರ ಹೇಳಿಕೆ ತುಳುನಾಡಿನ ಸಾಕಷ್ಟು ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಲಲಿತಾ ನಾಯಕ್ ವಿರುದ್ಧ ದೂರು ದಾಖಲಾಗಿದೆ.