ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ( MLA T D Rajegowdha ) ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ದೂರು ಸಂಚಲವನ್ನೇ ಸೃಷ್ಠಿಸಿತ್ತು. ಆದ್ರೇ ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರುದಾರ ವಿಜಯಾನಂದ ಅವರು, ತಾವು ಲೋಕಾಯುಕ್ತಕ್ಕೆ ನೀಡಿದ್ದಂತ ದೂರನ್ನು ಹಿಂಪಡೆದಿದ್ದಾರೆ. ಆದ್ರೇ ಕೇಸ್ ಯಾಕೆ ವಾಪಾಸ್ ಪಡೆಯುತ್ತಿದ್ದೇನೆ. ಏನು ಕಾರಣ ಎನ್ನುವುದು ಮಾತ್ರ ಅಚ್ಚರಿಯನ್ನು ಮೂಡಿಸಿದೆ.
ಹೌದು.. ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ವಿಜಯಾನಂದ ಎಂಬುವರು ನೀಡಿದ್ದಂತ ಕೇಸ್ ವಾಪಾಸ್ ಪಡೆದ್ದಾರೆ. ಲೋಕಾಯುಕ್ತಕ್ಕೆ ಈ ಸಂಬಂಧ ಸಲ್ಲಿಸಿರುವಂತ ಪತ್ರದಲ್ಲಿ, ತಾವು ಮಾಹಿತಿ ಇಲ್ಲದೇ ದೂರು ನೀಡಿದ್ದೇನೆ. ಈ ಹಿನ್ನಲೆಯಲ್ಲಿ ತಮ್ಮ ದೂರನ್ನು ವಾಪಾಸ್ ಪಡೆಯುತ್ತಿರೋದಾಗಿ ತಿಳಿಸಿದ್ದಾರೆ.
ಇನ್ನೂ ತಾನು ಈ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಬಿಜೆಪಿಯ ಡಿ.ಎನ್ ಜೀವರಾಜ್ ಅವರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದೆ. ಆದ್ರೇ ಅವರು ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಹೊರೆಸಿ ಕೆಲಸದಿಂದ ತೆಗೆದು ಹಾಕಿದ್ದರು. ಮತ್ತೆ ಕೆಲಸ ಕೇಳಿ ವಾಪಾಸ್ ಡಿ.ಎನ್ ಜೀವರಾಜ್ ಬಳಿಗೆ ಹೋದಾಗ, ನಿರುದ್ಯೋಗಿ ಎಂಬುದಾಗಿ ಹೇಳಿದ್ದಾರೆ.
BIGG NEWS: ಮಂಡ್ಯದಲ್ಲಿ ಕಮಲ ಅರಳಿಸಲು ಸಖತ್ ಪ್ಲ್ಯಾನ್ ; ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ
ನಿರುದ್ಯೋಗಿಯಾದ ನಾನು ಮತ್ತೆ ಡಿ.ಎನ್ ಜೀವರಾಜ್ ಅವರನ್ನು ಉದ್ಯೋಗಕ್ಕಾಗಿ ವಿನಂತಿಸಿದಾಗ, ರಾಜೇಗೌಡ ಮೇಲೆ ಲೋಕಾಯುಕ್ತಕ್ಕೆ ದೂರು ಅರ್ಜಿ ಕೊಡಲು ಒಪ್ಪಿದರೇ ಮಾತ್ರ ಉದ್ಯೋಗ ಕೊಡಿಸುವು ಆಮಿಷ ಒಡ್ಡಿದರು. ನಿರುದ್ಯೋಗ, ಬದುಕಿನ ಅಭದ್ರತೆಯಿಂದ ಜೀವರಾಜ್ ಅವರ ಪೊಳ್ಳು ಆಶ್ವಾಸನೆಗೆ ಬಲಿಯಾಗಿ, ನಾನು ಟಿ.ಡಿ ರಾಜೇಗೌಡ ಅವರ ಮೇಲೆ ದೂರಿನ ಅರ್ಜಿಗೆ ಸಹಿ ಹಾಕಿದೆ. ಈ ದೂರಿನ ವಿವರಣೆಯನ್ನಾಗಲೀ, ದೂರಿನ ಪ್ರತಿಯನ್ನಾಗಲೀ ನನಗೆ ತೋರಿಸಿರುವುದಿಲ್ಲ ಎಂದಿದ್ದಾರೆ.
ನನಗೆ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಕೆಯಾದ ನಂತ್ರ, ರಾಜೇಗೌಡ ಅವರ ಬಗ್ಗೆ ದೂರು ಏನು ನೀಡಲಾಗಿದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಟಿ.ಡಿ ರಾಜೇಗೌಡ ಅವರ ಕುಟುಂಬಕ್ಕೂ, ಕಾಫಿ ನಾಡಿನ ಆರಾಧ್ಯ ವ್ಯಕ್ತಿಯಾದ ದಿವಂಗತ ಸಿದ್ಧಾರ್ಥ ಹೆಗ್ಡೆಯವರ ಕುಟುಂಬದ ಮಧ್ಯೆ ನಡೆದಿರುವ ಒಡಂಬಡಿಕೆ, ಕರಾರು ಮತ್ತು ಕಾಫಿ ತೋಟದ ವಿಕ್ರಯಕ್ಕೂ ನನಗೂ ಯಾವುದೇ ಸಂಬಂಧವಿರುವುದಿಲ್ಲ. ಜೀವರಾಜ್ ಬೀಸಿದ ಆಮಿಷದ ಬಲೆಗೆ ಬಲಿಯಾಗಿ ನಾನು ಟಿ.ಡಿ ರಾಜೇಗೌಡ ವಿರುದ್ಧದ ದೂರು ಅರ್ಜಿಗೆ ಸಹಿ ಹಾಕಿದ್ದೇನ. ನನ್ನ ದೂರನ್ನು ವಾಪಾಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
BIG BREAKING NEWS: ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ | Actor Vikram Gokhale No More
ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ನೀಡಲಾಗಿದ್ದಂತ ದೂರುದಾರ ವಿಜಯಾನಂದ ದೂರು ವಾಪಾಸ್ ಪಡೆದ ಕಾರಣ, ಇದೀಗ ಬಿಜೆಪಿಗೆ ಭಾರೀ ಮುಖಭಂಗ ಉಂಟಾದಂತೆ ಆಗಿದೆ. ಅಲ್ಲದೇ ದೂರನ್ನು ವಿಜಯಾನಂದ ಅವರಿಗೆ ಆಮಿಷ ಒಡ್ಡಿ ಕೊಡಿಸಿರೋ ವಿಚಾರ ಬಟಾಬಯಲಾದಂತೆ ಆಗಿದೆ.
ಅಂದಹಾಗೇ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ವಿಜಯಾನಂದ ದೂರು ನೀಡಿದ್ದರು. ಅಲ್ಲದೇ ಈ ದೂರಿನಲ್ಲಿ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗಡೆ ಅವರ ಆಸ್ತಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂಬುದಾಗಿಯೂ ಉಲ್ಲೇಖಿಸಿದ್ದರು.