ನವದೆಹಲಿ: ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಮೀಶೋ(Meesho) ತನ್ನ ಉದ್ಯೋಗಿಗಳಿಗೆ ವಿರಾಮವನ್ನು ಘೋಷಿಸಿದೆ ಎಂದು ಇಂದು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ʻರೀಸೆಟ್ ಮತ್ತು ರೀಚಾರ್ಜ್ʼ ಎಂದು ಕರೆಯಲಾಗುವ ಈ ಉಪಕ್ರಮವು ಉದ್ಯೋಗಿಗಳಿಗೆ ಕೆಲಸದಿಂದ ಸಂಪೂರ್ಣವಾಗಿ ಅನ್ಪ್ಲಗ್ ಮಾಡಲು ಮತ್ತು ಬಿಡುವಿಲ್ಲದ ಹಬ್ಬದ ಮಾರಾಟದ ಅವಧಿಯ ನಂತರ ಅವರ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಕಂಪನಿ ಅನುವು ಮಾಡಿಕೊಡುತ್ತದೆ ಎಂದು ಬಹಿರಂಗಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ Meesho ಸಂಸ್ಥಾಪಕ ಮತ್ತು ಸಿಟಿಒ ಸಂಜೀವ್ ಬರ್ನ್ವಾಲ್, ʻನಾವು ಸತತ ಎರಡನೇ ವರ್ಷಕ್ಕೆ 11 ದಿನ ಕಂಪನಿಯಾದ್ಯಂತ ವಿರಾಮವನ್ನು ಘೋಷಿಸಿದ್ದೇವೆ!. ಮುಂಬರುವ ಹಬ್ಬದ ಸೀಸನ್ ಮತ್ತು ಕೆಲಸ ಜೀವನದ ಸಮತೋಲನದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಈ ವಿರಾಮ ಘೋಷಿಸಿದೆʼ ಎಂದು ತಿಳಿಸಿದ್ದಾರೆ.
We’ve announced an 11-day company-wide break for a second consecutive year!
Keeping the upcoming festive season & the significance of #WorkLifeBalance in mind, Meeshoites will take some much-needed time off to Reset & Recharge from 22 Oct-1 Nov.
Mental health is important.
— Sanjeev Barnwal (@barnwalSanjeev) September 21, 2022
ʻಯುವ ವಯಸ್ಕರಲ್ಲಿ ಹೃದ್ರೋಗದ ಅಪಾಯ ಹೆಚ್ಚಳʼಕ್ಕೆ ಪ್ರಮುಖ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ | Heart Attack
BIGG NEWS: ಶಿವಮೊಗ್ಗದಲ್ಲೂ NIA ದಾಳಿ; PFI ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ವಶಕ್ಕೆ