ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ( BMTC) ಸಂಪೂರ್ಣ ಸಮವಸ್ತ್ರ ಹಾಗೂ ಸಮರ್ಪಕವಾದ ಮಾರ್ಗಫಲಕ ಪ್ರದರ್ಶಿಸುವ ಚಾಲಕನಿರ್ವಾಹಕರ ಗೆ ಪ್ರಶಂಸನಾ ಪ್ರೊತ್ಸಾಹಿಸಲಾಗಿದೆ.
ಬೆಂ.ಮ.ಸಾ.ಸಂಸ್ಥೆ ಪೂರ್ವ ವಲಯದ ವ್ಯಾಪ್ತಿಯಲ್ಲಿ ಒಟ್ಟು 8 ಘಟಕಗಳು ಕಾರ್ಯಾಚರಣೆಯಲ್ಲಿದ್ದು ದಿನಾಂಕ:25.05.24, ಶನಿವಾರದಂದು ಎಲ್ಲಾ ಘಟಕಗಳ ಅರ್ಹ ಚಾಲಕ ಮತ್ತು ನಿರ್ವಾಹಕರನ್ನು ಗುರುತಿಸಿ, ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯು ಜನವರಿ’2024 ತಿಂಗಳನ್ನು “ಸಂಪೂರ್ಣ ಸಮವಸ್ತ್ರ ಹಾಗೂ ಸಮರ್ಪಕವಾದ ಮಾರ್ಗಫಲಕ ಪ್ರದರ್ಶಿಸುವ” ಮಾಹೆ” ಯನ್ನಾಗಿ ಆಚರಿಸಿದ್ದು, ವಲಯದ ಸುಮಾರು 3000 ಚಾಲನಾ ಸಿಬ್ಬಂದಿಗಳಲ್ಲಿ ಉತ್ತಮ ಶಿಸ್ತು, ಹಾಜರಾತಿ, ಪ್ರಯಾಣಿಕರೊಂದಿಗೆ ಸೌಜನ್ಯಯುತ ವರ್ತನೆ ಹೊಂದಿ, ಸಂಪೂರ್ಣ ಸಮವಸ್ತ್ರ ಮತ್ತು ನಿಗದಿತ ಮಾರ್ಗಫಲಕಗಳನ್ನು ಪ್ರದರ್ಶಿಸಿ ಕರ್ತವ್ಯ ನಿರ್ವಹಿಸಿದ ಒಟ್ಟು 235 ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಪೂರ್ವ ವಲಯದ ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ಸ್ ಸಿಟಿ, ಚಂದಾಪುರ, ಹುಸ್ಕೂರು, ಗುಂಜೂರು, ಸರ್ಜಾಪುರ ರಸ್ತೆ ಮತ್ತು ಹೂಡಿ ಘಟಕಗಳಲ್ಲಿ ಸರಳವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತು.
ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ವಿಭಾಗೀಯ ಸಂಚಾರ ಅಧಿಕಾರಿ ಪುರುಷೋತ್ತಮ್ ರವರು ಇಂದಿರಾನಗರ ಮತ್ತು ಕೋರಮಂಗಲ ಘಟಕಗಳ ಸಮಾರಂಭಗಳಲ್ಲಿ ಭಾಗವಹಿಸಿ, ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ವಿತರಿಸಿರುತ್ತಾರೆ. ಉತ್ತಮ ಶಿಸ್ತು, ವರ್ತನೆ, ವೇಳಾಪಟ್ಟಿಗನುಸಾರ ಕಾರ್ಯಾಚರಣೆ ಅತಿ ಮುಖ್ಯವಾಗಿದ್ದು, ಎಲ್ಲಾ ಸಿಬ್ಬಂದಿಗಳು ಅನುಸರಿಸಲು ತಿಳಿಸಿದರು. ಎಲ್ಲಾ ಸಿಬ್ಬಂದಿಗಳೂ ಪ್ರತಿದಿನ ಸಮರ್ಪಕವಾಗಿ ನಿಗದಿತ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಬಗ್ಗೆ ತಿಳಿಸಿದರು. ಇಂದಿರಾನಗರ ಘಟಕ ವ್ಯವಸ್ಥಾಪಕರಾದ ಲಕ್ಷ್ಮಿ ಮತ್ತು ಸಿಬ್ಬಂದಿಗಳು ಹಾಗೂ ಕೋರಮಂಗಲ ಘಟಕದ ಹಿರಿಯ ಘಟಕ ವ್ಯವಸ್ಥಾಪಕರಾದ ಶ್ರೀನಿವಾಸ ರೆಡ್ಡಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಇತರೆ ಘಟಕಗಳಲ್ಲಿಯೂ ವಿಭಾಗೀಯ ತಾಂತ್ರಿಕ ಅಭಿಯಂತರ ಕೆ. ಚಂದು ಮತ್ತು ಆಯಾ ಘಟಕ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ರಾಹುಲ್ ದ್ರಾವೀಡ್ ಬದಲಿಗೆ ʻಟೀಂ ಇಂಡಿಯಾʼದ ನೂತನ ಕೋಚ್ ಆಗಿ ʻಗೌತಮ್ ಗಂಭೀರ್ʼ ಆಸಕ್ತಿ : ವರದಿ