ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನ ನೀಡದಿದ್ದಕ್ಕೆ ನೀವು ಅಸಮಾಧಾನಗೊಂಡಿದ್ದಾರಾ? ಇದಕ್ಕಾಗಿಯೇ ಸದನಕ್ಕೆ ಹಾಜರಾಗುತ್ತಿಲ್ಲವಾ ಎಂವ ಪ್ರಶ್ನೆ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರನ್ನು ಕೇಳಬೇಕು. ನನ್ನನ್ನು ಕೇಳಿದರೆ ನಾನು ಏನು ಹೇಳುವುದಕ್ಕೆ ಆಗುತ್ತದೆ ಎಂದರು.
BIGG NEWS: ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಬೇಕು; ಡಿಕೆಶಿ ಖಡಕ್ ವಾರ್ನಿಂಗ್
ಇವತ್ತು ಬಂದು ಮಂತ್ರಿ ಆಗು ಅಂದರೆ ಇವತ್ತೆ ಆಗುತ್ತೇನೆ ಇದೆಲ್ಲಾ ನನ್ನ ಕೈಯಲ್ಲಿ ಇಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ , ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರದ ನಾಯಕರು ಚರ್ಚೆ ಮಾಡಬೇಕು. ಆದರೆ ಏಕೆ ಅವರು ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.ಇನ್ನು ನಾನು ಇವತ್ತೇ ಮದುವೆ ಗಂಡು ಆಗಲು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ.
BIGG NEWS: ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಬೇಕು; ಡಿಕೆಶಿ ಖಡಕ್ ವಾರ್ನಿಂಗ್
ಎಷ್ಟು ಖಾಲಿ ಇದೆಯೋ ಅದೆಲ್ಲಾ ಭರ್ತಿ ಮಾಡಲಿ ಎನ್ನುವುದು ನನ್ನ ಅಪೇಕ್ಷೆ. ಆರೋಪ ಮುಕ್ತರಾದ ಮೇಲೆ ಅವಕಾಶ ಕೊಡುತ್ತೇವೆ ಅಂದಿದ್ದರು. ಹಾಗಾಗಿ ನೀವು ಈ ಪ್ರಶ್ನೆಯನ್ನು ಈಗ ಅವರಿಗೆ ಹೋಗಿ ಕೇಳಿ. ನಾನು ಇವತ್ತು ಮದುವೆ ಗಂಡು ಆಗುವುದಕ್ಕೆ ತಯಾರಿದ್ದೇನೆ. ತೀರ್ಮಾನ ಮಾಡಬೇಕಾದವರು ಹಿರಿಯರು. ಅವರೇನು ಮಾಡಲಿಲ್ಲ ಅಂದರೆ ನಾನೇನು ಮಾಡಲಿ ಎಂದು ಹೇಳಿದ್ದಾರೆ.