ಮಂಡ್ಯ: ಜಿಲ್ಲೆಯಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಮಂಡ್ಯಸ ಮದ್ದೂರಿನ ಎಳೆನೀರು ಮಾರುಕಟ್ಟೆ ಬಳಿಯ ಬೆಂ-ಮೈ ಹೆದ್ದಾರಿಯಲ್ಲಿ ಹಿಂಬದಿಯಿಂದ ಹಾಲಿನ ಟ್ಯಾಂಕರ್ ಭೈಕ್ ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಕೆ.ಆರ್.ಪೇಟೆ ತಾಲೂಕಿನ ಗೊಲ್ಲರಕೊಪ್ಪಲು ಗ್ರಾಮದ ದೀಪಕ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸೋಮನಹಳ್ಳಿ ಎಸ್.ಸಿ.ಎಂ.ಎಂ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಕ್ರೀಡೆಗೆ ತಂಗಿ ಬಿಡಲು ಬಂದಿದ್ದ ದೀಪಕ್. ತಂಗಿಯನ್ನು ಬಿಟ್ಟು ಮಂಡ್ಯ ಕಡೆ ಬೈಕ್ ಚಾಲಕ ದೀಪಕ್ ಹೊರಟಿದ್ದರು. ಎಳೆನೀರು ಮಾರುಕಟ್ಟೆ ಬಳಿ ಹೋಗುತ್ತಿದ್ದ ವೇಳೆ ದುರ್ಘಘಟನೆ ಸಂಭವಿಸಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಮೃತ ಚಾಲಕನ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ