ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳ ( Degree College ) ಬೋಧಕ, ಬೋಧಕೇತರ ಸಿಬ್ಬಂದಿಗಳು ವಿದೇಶಿ ಪ್ರವಾಸ ( foreign tours ) ಕೈಗೊಳ್ಳುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯಿಂದ ( Department of College Education ) ಮಹತ್ವದ ಸೂಚನೆಯನ್ನು ಹೊರಡಿಸಲಾಗಿದೆ.
ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಪದವಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ವಿದೇಶಿ ಪ್ರವಾಸ ಕೈಗೊಳ್ಳುವ ಸಂಬಂಧ ಅಪೂರ್ಣ ಮಾಹಿತಿಯನ್ನು ಒದಗಿಸುತ್ತಿದ್ದಾರೆ. ಈ ಮೂಲಕ ಅನಾವಶ್ಯಕವಾಗಿ ಪತ್ರ ವ್ಯವಹಾರಗಳಿಗೆ ಆಸ್ಪದ ನೀಡಲಾಗುತ್ತಿದ್ದು, ಇದು ವಿಳಂಬಕ್ಕೂ ಕಾರಣವಾಗುತ್ತಿದೆ ಎಂದಿದ್ದಾರೆ.
BIGG NEWS : ಜ.12ರಂದು ಉಡುಪಿಗೆ ʼಯುಪಿ ಸಿಎಂ ಯೋಗಿ ಆದಿತ್ಯನಾಥ್ʼ : ರಾಜ್ಯಮಟ್ಟದ ‘ಯುವ ಸಂಗಮʼ ಸಮಾವೇಶದಲ್ಲಿ ಭಾಗಿ
ವಿದೇಶಿ ಪ್ರವಾಸ ಕೈಗೊಳ್ಳುವ ಬೋಧಕ, ಬೋಧಕೇತರರುಗಳ ಪ್ರಸ್ತಾವನೆಗಳನ್ನು 2 ತಿಂಗಳ ಮುಂಚಿತವಾಗಿ ಸಲ್ಲಿಸಬೇಕು. ಒಂದು ವೇಳೆ ವಿಳಂಬವಾಗಿ ಸಲ್ಲಿಸಿದ್ದಲ್ಲಿ ಶಿಫಾರಸ್ಸು ಮಾಡುವ ಪ್ರಾಧಿಕಾರವನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಆರೋಪಿ ಆಫ್ತಾಬ್ನನ್ನು ನೇಣು ಬಿಗಿದು ಸಾಯಿಸಬೇಕು: ಶ್ರದ್ಧಾ ವಾಕರ್ ತಂದೆ ಆಗ್ರಹ
ಇನ್ನೂ ಸಂಪೂರ್ಣ ದೃಢೀಕೃತ ಮಾಹಿತಿ, ದಾಖಲೆಗಳನ್ನು ಪ್ರಾಂಶುಪಾಲರ ಸಹಿ ಮತ್ತು ಮೊಹರಿನೊಂದಿಗೆ ವಿದೇಶಿ ಪ್ರವಾಸದ ಬಗ್ಗೆ ಪ್ರಸ್ತಾವನೆಗಳನ್ನು ಕಚೇರಿಗೆ ಸಲ್ಲಿಸಬೇಕು. ವಿಳಂಬ ಹಾಗೂ ಅಪೂರ್ಣ ದಾಖಲೆಗಳನ್ನೊಳಗೊಂಡಂತ ಪ್ರಸ್ತಾವನೆ ಸಲ್ಲಿಸಿದ್ದರೇ, ಅದನ್ನು ಯಾವುದೇ ಮಾಹಿತಿ ನೀಡದೇ ತಿರಸ್ಕರಿಸಲಾಗುತ್ತದೆ ಎಂದು ಹೇಳಿದೆ.
ಒಂದು ವೇಳೆ ಪ್ರಾಂಶುಪಾಲರು, ಪ್ರಭಾರ ಪ್ರಾಂಶುಪಾಲರಾಗಿದ್ದಲ್ಲಿ, ಅವರ ಪ್ರಸ್ತಾವನೆಗಳನ್ನು ಸಲ್ಲಿಸುವ ಮೊದಲು ಅವರು ನಿರ್ವಹಿಸುತ್ತಿರುವ ಪ್ರಾಂಶುಪಾಲರ ಕರ್ತವ್ಯವನ್ನು ಬದಲಿ ವ್ಯವಸ್ಥೆ ಮಾಡಿರುವ ದಾಖಲೆಗಳೊಂದಿಗೆ ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರ ಮುಖಾಂತರ ಕಳುಹಿಸಿಕೊಡುವಂತೆ ಸೂಚಿಸಿದೆ.