ಬೆಂಗಳೂರು: ಮಹಿಳಾ ಕಾಫಿ ಅಲೈಯನ್ಸ್-ಇಂಡಿಯಾ ಚಾಪ್ಟರ್ (WCAI) ಸಂಸ್ಥೆಯು ತಮ್ಮ ಕಾಫಿ ಸಂತೆಯ 6ನೇ ಆವೃತ್ತಿಯನ್ನು 2022ರ ಅಕ್ಟೋಬರ್ 29 ಮತ್ತು 30ರಂದು ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ನಡೆಯಲಿದೆ. 2014ರಿಂದ ವಾರ್ಷಿಕವಾಗಿ ಕಾಫಿ ಸಂತೆಯನ್ನು ( Coffee Alliance ) ನಡೆಸಿಕೊಂಡು ಬರಲಾಗುತ್ತಿದ್ದು, ಎರಡು ವರ್ಷಗಳ ಕೋವಿಡ್ ಅಂತರದ ನಂತರ ಈ ವರ್ಷ ಸಂತೆಯನ್ನು ಆಯೋಜಿಸಲಾಗಿದೆ.
ಭಾರತದಲ್ಲಿ ಸಾಂಪ್ರದಾಯಕ ಮತ್ತು ಸಾಂಪ್ರದಾಯಕವಲ್ಲದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಬೆಂಬಲಿಸಲು ನಿಧಿ ಸಂಗ್ರಹಣೆ ಸೇರಿದಂತೆ ಕಾಫಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದು ಈ ಸಂತೆಯ ಪ್ರಮುಖ ಕಾರ್ಯಕ್ರಮವಾಗಿದೆ.
ದೈಹಿಕ, ಮಾನಸಿಕ ಮತ್ತು ಆಹಾರ ಪದ್ಧತಿಗಳ ಮೂಲಕ ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದು – ಸಚಿವ ಡಾ.ಕೆ ಸುಧಾಕರ್
ಈ ಯೋಜನೆಗಳು ಕಾಫಿ ತೋಟಗಳ ಮಹಿಳಾ ಕಾರ್ಮಿಕರು ಮತ್ತು ಅವರ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸಲು ಮತ್ತು ಅವರ ಮಾನಸಿಕ ಮತ್ತು ದೈಹಿಕ ಅಗತ್ಯಗಳಿಗಾಗಿ ಸಮಾಜದ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ, ಡಬ್ಲ್ಯುಸಿಎಐ ಸಂಸ್ಥೆಯು ಕಾಫಿ ತೋಟಗಳ ಬಡ ಮಹಿಳಾ ಕಾರ್ಮಿಕರು ಮತ್ತು ಅವರ ಹೆಣ್ಣು ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಬೆಂಬಲಿಸುವ ಹಾಗೂ ಅವುಗಳ ಅಗತ್ಯತೆಯ ಅರಿವನ್ನು ನಿರ್ಮಿಸುವಲ್ಲಿ ತೊಡಗಿಕೊಂಡಿದೆ
ಈ 6ನೇ ಕಾಫಿ ಸಂತೆಯಲ್ಲಿ ‘ವುಮೆನ್ ಸ್ಟಾರ್ಸ್ ಬ್ರೂವರ್ ಸ್ಕಿಲ್ಸ್ ಚಾಂಪಿಯನ್ಷಿಪ್’ ಸ್ಪರ್ಧೆ ನಡೆಯಲಿದೆ. ‘ಕಾಪಿ ನಕ್ಷತ್ರ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮನರಂಜನಾ ಕಾರ್ಯಕ್ರಮಗಳೂ ಪ್ರದರ್ಶನಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುನಾಲಿನಿ ಮೆನನ್ ಹಾಗೂ ಕಾಫಿ ಬೆಳೆಗಾರ್ತಿ ಶ್ರೀಮತಿ ಪೂರ್ಣಿಮಾ ಜೈರಾಜ್ ತಿಳಿಸಿದ್ದಾರೆ.