ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಹೆಚ್ಚಾಗಿ ಅಡುಗೆಗೆ ಅಡುಗೆ ಅಥವಾ ಒಳ್ಳೆಣ್ಣೆ, ಶೇಂಗಾ ಎಣ್ಣೆ ಬಳಕೆ ಮಾಡಿರಬಹುದು ಬಳಸುತ್ತಾರೆ. ಇನ್ನು ದಕ್ಷಣ ಕನ್ನಡದ ಕಡೆಗಳಲ್ಲಿ ಹೆಚ್ಚಾಗಿ ಅಡುಗೆಗೆ ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಯಾವುದೇ ಎಣ್ಣೆಯನ್ನು ಆಹಾರ ತಯಾರಿಕೆಗೆ ಬಳಸಬಹುದು. ಆದರೆ ಹಿತಮಿತವಾಗಿ ಬಳಸಬೇಕು. ಇಲ್ಲದಿದ್ದೆ ಆರೋಗ್ಯದ ಮೇಲೆ ಪರಿಣಾಮ ನೀರುತ್ತದೆ.
ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ – ಸಿಎಂ ಬಸವರಾಜ ಬೊಮ್ಮಾಯಿ
ಹಾಗಾಗಿ ಆರೋಗ್ಯದ ದೃಷ್ಠಿಯಿಂದ ಅಡುಗೆಗೆ ಕೊಬ್ಬರಿ ಎಣ್ಣೆ ಉತ್ತಮ. ಅಡುಗೆಗೆ ಎಣ್ಣೆ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ತೆಂಗಿನ ಎಣ್ಣೆಯು ತೂಕ ಇಳಿಕೆಗೆ ಅತ್ಯುತ್ತಮ ಆಯ್ಕೆ ಆಗಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ ಮತ್ತು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇದು ನಿಮ್ಮ ಆಂತರಿಕ ಆರೋಗ್ಯ ಕಾಪಾಡಲು ತುಂಬಾ ಅತ್ಯಗತ್ಯ.
ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದಾಗುವ ಪ್ರಯೋಜನಗಳು
ರಕ್ತದಲ್ಲಿ ಸಕ್ಕರೆ ನಿಯಂತ್ರಣ
ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದ್ರೆ ಇದು ರಕ್ತದ ಸಕ್ಕರೆ ನಿಯಂತ್ರಿಸುವಲ್ಲಿ ಪ್ರಯೋಜನಕಾರಿ. ತೆಂಗಿನ ಎಣ್ಣೆಯಲ್ಲಿ ಕಂಡು ಬರುವ ಪೋಷಕಾಂಶಗಳು ಮಧುಮೇಹಿಗಳ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. 2009 ರಲ್ಲಿ ಅನಿಮಲ್ ಸ್ಟಡೀಸ್ ನಲ್ಲಿ ಪ್ರಕಟವಾದ ಸಂಶೋಧನೆ ಹೇಳಿದ ಪ್ರಕಾರ, ತೆಂಗಿನ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ಇನ್ಸುಲಿನ್ ಹೆಚ್ಚಾಗುವಿಕೆ ತಡೆಯುತ್ತದೆ.
ತೂಕ ನಷ್ಟ
ತೂಕ ನಷ್ಟಕ್ಕೆ ತೆಂಗಿನ ಎಣ್ಣೆ ಉತ್ತಮ ಆಯ್ಕೆ ಆಗಿದೆ. ತೆಂಗಿನ ಎಣ್ಣೆಯ ಸ್ಯಾಚುರೇಟೆಡ್ ಕೊಬ್ಬಿನ ಮಧ್ಯಮ ಸರಣಿ ಟ್ರೈಗ್ಲಿಸರೈಡ್ಗಳು ಹಸಿವನ್ನು ನಿಯಂತ್ರಿಸುತ್ತವೆ. ಕಡಿಮೆ ಕ್ಯಾಲೊರಿ ಸೇವನೆಗೆ ಸಹಕಾರಿಯಾಗಿದೆ.
ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ
ತೆಂಗಿನೆಣ್ಣೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದ್ದು, ಒತ್ತಡ ಕಡಿಮೆ ಮಾಡಲು ಸಹಕಾರಿ. ತೆಂಗಿನ ಎಣ್ಣೆಯ ಪೋಷಕಾಂಶಗಳು ಖಿನ್ನತೆ ಸಮಸ್ಯೆ ಹೊಡೆದೋಡಿಸುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ ಶಿವಕುಮಾರ್ ಸೇರಿ ನಾಲ್ವರ ವಿರುದ್ಧದ ಇಡಿ ವಿಚಾರಣೆ ಜ.18ಕ್ಕೆ ಮುಂದೂಡಿಕೆ
ಆರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಳ
ತೆಂಗಿನ ಎಣ್ಣೆಯ ನಿಯಮಿತ ಸೇವನೆ ನಿಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಸಂಯುಕ್ತ ಮಧ್ಯಮ ಸರಪಳಿಯ ಟ್ರೈಗ್ಲಿಸರೈಡ್ಗಳು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತವೆ. ತೆಂಗಿನ ಎಣ್ಣೆಯನ್ನು 8 ವಾರ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಯಕೃತ್ತಿನ ರೋಗ ತಡೆ
ಯಕೃತ್ತಿನ ಸಮಸ್ಯೆಗಳಿಗೆ ತೆಂಗಿನ ಎಣ್ಣೆ ಬಳಕೆ ಉತ್ತಮ ಆಯ್ಕೆ. ತೆಂಗಿನ ಎಣ್ಣೆ ಯಕೃತ್ತಿನ ಆರೋಗ್ಯ ಹೆಚ್ಚಿಸುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಯಕೃತ್ತಿನ ಸಮಸ್ಯೆ ನಿವಾರಣೆಗೆ ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಸೇವಿಸಿ.
ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತಮ
ತೆಂಗಿನ ಎಣ್ಣೆಯನ್ನು ದೀರ್ಘಕಾಲ ಮನೆಮದ್ದುಗಳಿಗೆ ಬಳಸುತ್ತಾರೆ. ವಿಟಮಿನ್ ಸಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಇದರಲ್ಲಿವೆ. ಚರ್ಮ ಮತ್ತು ಕೂದಲನ್ನು ಪೋಷಿಸುತ್ತದೆ.
BREAKING NEWS: ‘ಮೈಸೂರು ದಸರಾ’ ಆನೆ ‘ಗೋಪಾಲಸ್ವಾಮಿ’ ಇನ್ನಿಲ್ಲ | Mysuru Dasara elephant Gopalaswamy no more