ದಕ್ಷಿಣಕನ್ನಡ : ಕರಾವಳಿ ಜನರು ʻಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತʼರಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಎಚ್ಚರಿಕೆ ಸಂದೇಶ ನೀಡಿದ್ದಾರೆ
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಬೆನ್ನಲ್ಲೇ ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಮಾದ್ಯಮಗಳೊಂದಿಗೆ ಮಾತನಾಡಿ, ಕರಾವಳಿಯಲ್ಲಿ ನಡೆಯುತ್ತಿರುವ ಉಗ್ರಕೃತ್ಯಗಳ ಬಗ್ಗೆ ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು ಎಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ
ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕರಾವಳಿ ಜನರು ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಬೇಕು. ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು. ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವ ನಡೆಯುತ್ತೆ. ಜನಸಂದಣಿ ಹೆಚ್ಚಿರುವ ಸಮಾರಂಭ ನಡೆಯುತ್ತೆ.ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿ. ಪ್ರತಿಯೊಬ್ಬರೂ ಈ ಬಗ್ಗೆ ಸದಾ ಜಾಗೃತರಾಗಿಬೇಕು ಎಂದು ಶ್ರೀಗಳು ಎಚ್ಚರಿಸಿದ್ದಾರೆ.
ಹಿಂದೂ ಸಂಕೇತ ಬಳಸಿ ಉಗ್ರ ಕೃತ್ಯ ಮಾಡುವುದು ನೋಡುತ್ತಿದ್ದೇವೆ. ಸಮಾಜದಲ್ಲಿ ದುಷ್ಕೃತ್ಯ ಎಸಗುವವರು ಹಿಂದೂ ಸಮಾಜದ ಮೇಲೆ ಹೇರುವ ನಿಟ್ಟಿನಲ್ಲಿ ಈ ಚಟುವಟಿಕೆ ನಡೆಸುತ್ತಿದ್ದಾರೆ. ಹೀಗಾಗಿಪ್ರತಿಯೊಬ್ಬರೂ ಮೊಬೈಲ್ ಹಾಗೂ ದಾಖಲೆ ಕಳೆದುಹೋದರೆ ಸಂಬಂಧಪಟ್ಟ ಇಲಾಖೆಗೆ ತಕ್ಷಣ ಮಾಹಿತಿ ನೀಡಿ.ಇಲ್ಲವಾದರೆ ಇಂತಹ ಸಂದರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತೆ ಎಂದು ಹೇಳಿದ್ದಾರೆ