ಬೆಂಗಳೂರು : ಮಹಾರಾಷ್ಟ್ರದ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕೂಡ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಹಿಂದೆ ಹೇಳಿಕೆ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ಈ ಒಂದು ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಉತ್ತರಿಸಿದ್ದಾರೆ.
ಬಿವೈ ವಿಜಯೇಂದ್ರ ಹೇಳಿದ್ದೇನು?
ಇನ್ನು ಇದೇ ವಿಷಯವಾಗಿ ಬಿವೈ ವಿಜಯೇಂದ್ರ ಮಾತನಾಡಿದ್ದು ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ ಸರ್ಕಾರ ಬಿಡಿಸುವ ಕೆಲಸ ನಾವು ಮಾಡುವುದಿಲ್ಲ ಆದರೆ ಚುನಾವಣಾ ರಿಸಲ್ಟ್ ಸರಕಾರದ ಮೇಲೆ ಪರಿಣಾಮ ಬೀರುತ್ತದೆ ಯಾವ ರೀತಿ ಪರಿಣಾಮ ಬೀಳುತ್ತೆ ಎಂಬುದಕ್ಕೆ ನಾವು ಹೊಣೆಗಾರರಲ್ಲ. ವಿರೋಧ ಪಕ್ಷದಲ್ಲೇ ನಾವು ಜವಾಬ್ದಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಅಶ್ವಥ್ ನಾರಾಯಣ ಹೇಳಿದ್ದೇನು?
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ್ ಕುರ್ಚಿಗಾಗಿ ಅವರವರೇ ಗುದ್ದಾಡುತ್ತಿದ್ದಾರೆ ಯಾಕೆಂದರೆ ವರ್ಗಾವಣೆ ದಂಧೆ ಆರೋಪ ಕೇಳಿ ಬಂದಿದೆ ಪ್ರತಿನಿತ್ಯ ಅವರದ್ದೇ ಶಾಸಕರು ಹೇಳಿಕೆ ಕೊಟ್ಟಿದ್ದಾರೆ ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಅಂತ ಸಾಮಾನ್ಯವಾಗಿ ಹೇಳುತ್ತಿದ್ದಾರೆ ಒಳ ಜಗಳದಿಂದ ಸರ್ಕಾರ ಬೀಳಬೇಕೆ ಹೊರತು ನಾವು ಬೀಳಿಸಲ್ಲ ಅವರ ಜಗಳಗಳೇ ಹೆಚ್ಚಾಗಿದೆ ನಾವು ಪ್ರಯತ್ನ ಏನು ಮಾಡುತ್ತಿಲ್ಲ ಅಧಿಕಾರಕ್ಕಾಗಿ ಗುದ್ದಾಟ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅಶ್ವಥನಾರಾಯಣ ಹೇಳಿಕೆ ನೀಡಿದರು.