ಯಾದಗಿರಿ: ಇಂದು ಸಿಎಂ ಸಿದ್ಧರಾಮಯ್ಯ ಹಾಗೂ ಶಾಸಕರು ದಸರಾ ಉದ್ಘಾಟನಾ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದಸರಾ ಉದ್ಘಾಟನಾ ವೇದಿಕೆ ರಾಜಕೀಯಕ್ಕೆ ಬಳಕೆಯಾಗಬಾರದಾಗಿತ್ತು. ಸಿಎಂ ಸಿದ್ಧರಾಮಯ್ಯ ಏನೂ ತಪ್ಪು ಮಾಡಿಲ್ಲ ಅಂತ ಹೇಳುತ್ತಾರೆ. ಏನು ತಪ್ಪು ಮಾಡಿಲ್ಲ ಅಂತೀರಾ, ರಾಜಕೀಯ ಮಾತಾಡಲು ಇದು ವೇದಿಕೆನಾ ಎಂಬುದಾಗಿ ಕೇಳಿದರು.
ದಸರಾ ಉದ್ಘಾಟನಾ ವೇದಿಕೆ ರಾಜಕಾರಣಿಗಳ ತೆವಲು ತೀರಿಸಿಕೊಳ್ಳುವಂತ ವೇದಿಕೆ ಆಗಬಾರದು. ಹೀಗೆ ರಾಜಕೀಯಕ್ಕೆ ಬಳಕೆ ಆಗಿರೋದು ತಪ್ಪು. ಮುಂದಿನ ವರ್ಷ ಯಾವುದೇ ಸರ್ಕಾರವಿರಲಿ, ಆಡಳಿತವಿರಲೇ, ದಸರಾ ಉದ್ಘಾಟನಾ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳದಂತೆ ಮನವಿ ಮಾಡಿದರು.
ಮೆಸ್ಕಾಂ ಗ್ರಾಹಕರ ಗಮನಕ್ಕೆ: ನಾಳೆಯಿಂದ ಅ.7ರವರೆಗೆ ವಿದ್ಯುತ್ ಬಿಲ್ ಸೇರಿ ಆನ್ ಲೈನ್ ಸೇವೆ ಅಲಭ್ಯ | MESCOM