ಧಾರವಾಡ: ಸಿಎಂ ಸಿದ್ಧರಾಮಯ್ಯ ಅವರ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರ ಫಾರ್ಮ್ ಹೌಸಿನಲ್ಲಿ ದರೋಡೆಗೆ ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ 15 ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ತಾಲ್ಲೂಕಿನ ದಡ್ಡಿಕಮಲಾಪುರ ಗ್ರಾಮದ ಬಳಿಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸೇರಿದಂತ ಮಮತಾ ಎಂಬ ಹೆಸರಿನಡಿ ಫಾರ್ಮ್ ಹೌಸ್ ಇದೆ. ಕಳೆದ ಆಗಸ್ಟ್.13ರಂದು ಸುಮಾರು 8ರಿಂದ 10 ಜನರ ಗುಂಪು ಫಾರ್ಮ್ ಪೌಸ್ ಗೆ ನುಗ್ಗಿ ಅಲ್ಲಿ ಮಲಗಿದ್ದಂತ ಕಣ್ಣಪ್ಪ ಜಡ್ಲಿ, ಹನುಮಂತ ಧನದಾವರ್, ಅಶೋಕ ಪೋತಲಿ, ಲಕ್ಷ್ಮಣ ಚಂದರಗಿ ಎಂಬುವರಿಗೆ ಚಾಕು ತೋರಿಸಿ ಹೆದರಿಸಿ, ಕೈಕಾಲು ಕಟ್ಟಿ ಹಾಕಿ ಅವರ ಬಳಿಯಲ್ಲಿನ ಮೊಬೈಲ್ ಪೋನ್, ಇತರೆ ವಸ್ತುಗಳನ್ನು ದರೋಡೆ ಮಾಡಿದ್ದರು.
ಈ ವಿಷಯ ತಿಳಿದು ಅದೇ ದಿನ ಎಸ್ಪಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ದರೋಡೆಕೋರರ ಬಂಧನಕ್ಕೆ 8 ತಂಡವನ್ನು ರಚಿಸಿದ್ದರು. ಈ ತಂಡವು ತನಿಖೆ ನಡೆಸಿ 15 ಜನ ಆರೋಪಿಗಳನ್ನು ವಿಚಾರಣೆಯ ಬಂಧಿಸಿದೆ. ಬಂದಿತ ಆರೋಪಿಗಳಿಂದ 16 ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದಂತ 7 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಲೋಕಸಭೆಯಲ್ಲಿ ಮೂರು ಮಹತ್ವದ ಮಸೂದೆಗಳನ್ನು ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಸಾಗರ, ಹೊಸನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಾಂದಿ: 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ