ತುಮಕೂರು : ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿಲ್ಲ, ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೆ ಮಾತನಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿ ಮರಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತುರುವೇಕೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿಲ್ಲ, ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೆ ಮಾತನಾಡುವುದು, ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ ನಾಯಿಮರಿಯಂತೆ ಇರ್ತಾರೆ ಅಷ್ಟೇ ಎಂದು ಹೇಳಿದೆ ಎಂದು ಸ್ಪಷ್ಟನೆ ನೀಡಿದರು. ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿಗೆ ಧೈರ್ಯವಿದ್ರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ, ಕಾಂಗ್ರೆಸ್ ಧಮ್ ಬಗ್ಗೆ ಪ್ರಶ್ನೆ ಮಾಡುವ ಸಿಎಂ ಬೊಮ್ಮಾಯಿ,ಮೋದಿ ಮುಂದೆ ನಾಯಿಯಂತೆ ಇರ್ತಾರೆ. ಬೊಮ್ಮಾಯಿಗೆ ಧಮ್, ತಾಕತ್ ಇದ್ರೆ ಕೇಂದ್ರದಿಂದ ಅನುದಾನ ತನ್ನಿ ಎಂದು ಸಿದ್ದರಾಮಯ್ಯ ಹೇಳಿದ್ದರು.
Black magic: ಪ್ರಿಯಕರನನ್ನು ಪಡೆಯಲು ಮಂತ್ರವಾದಿ ಮೊರೆ ಹೋದ ಯುವತಿ : ಮುಂದೇನಾಯ್ತು ಗೊತ್ತಾ..?
ಇದು 2022ರ ‘ಬೆಂಗಳೂರು ಸಿಟಿ’ಯ ಸಂಪೂರ್ಣ ‘ಕ್ರೈಂ ರಿಪೋರ್ಟ್’ | Bangalore Crime Report