ಹುಬ್ಬಳ್ಳಿ: ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರುವುದು ಬೇಡವೆಂದು ಈಗಾಗಲೇ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮಹಾ ಸಿಎಸ್ ಗೆ ಪತ್ರದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಇದನ್ನು ಮೀರಿ ಬಂದರೇ ಅಂತಹ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರಿಗೊಂದು ಸುವರ್ಣಾವಕಾಶ: ವಿಎಂ ವೇರ್ ನೀಡುತ್ತಿದೆ ವಿಶೇಷ ವೃತ್ತಿ ತರಬೇತಿ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದು ಬೇಡವೆಂದು ಸರ್ಕಾರ ತಿಳಿಸಿದೆ. ಅಲ್ಲದೇ ಅವರು ಕರ್ನಾಟಕಕ್ಕೆ ಹೀಗೆ ಬರುವುದು ಉಚಿತವಲ್ಲ ಎಂದರು.
ಮಹಾರಾಷ್ಟ್ರ-ಬೆಳಗಾವಿ ಗಡಿವಿವಾದ ತಾರಕಕ್ಕೇರಿದೆ. ಈ ಸಂದರ್ಭದಲ್ಲಿಯೇ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವುದು ಮತ್ತಷ್ಟು ಗಡಿ ವಿವಾದವನ್ನು ಹೆಚ್ಚಿಸಿದಂತೆ ಆಗಲಿದೆ. ಈಗಾಗಲೇ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಮುಗಿದು ಹೋದ ಅಧ್ಯಾಯವಾಗಿದೆ. ಹೀಗಿರುವಾಗ ಪದೇ ಪದೇ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಹೇಳಿದರು.
Karnataka Politics: ಬಿಜೆಪಿ ಸರ್ಕಾರ 40% ಹಣ ಖರ್ಚು ಮಾಡಿ, 60% ಜೇಬಿಗೆ ಇಳಿಸಿದೆ – ಮಾಜಿ ಸಿಎಂ HDK ಗಂಭೀರ ಆರೋಪ