ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ( Mysore Dasara Jamboo Savari 2022 ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ನಾಡ ದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಮೂಲಕ ಮೈಸೂರಿನ ದಸರಾ ಜಂಬೂಸವಾರಿ ಆರಂಭಗೊಂಡಿದೆ.
ನಂದಿ ಧ್ವಜಕ್ಕೆ ಸಿಎಂ ಬೊಮ್ಮಾಯಿ ಪೂಜೆ
ವಿಶ್ವವಿಖ್ಯಾತ ಜಂಬೂಸವಾರಿಯ ದಿನವಾದ ಇಂದು, ಮೈಸೂರಿಗೆ ತೆರಳಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು ಅರಮನೆಯಲ್ಲಿನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ, ದಸರಾ ಜಂಬೂ ಸವಾರಿ ಮುನ್ನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಮನ ಸೆಳೆದ ಸ್ತಬ್ಧ ಚಿತ್ರಗಳ ಪ್ರದರ್ಶನ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ( Mysore Dasara 2022 ) ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಕೊರೋನಾ ನಂತ್ರ 2 ವರ್ಷಗಳ ಬಳಿಕ ದಸರಾದಲ್ಲಿ ಸ್ತಬ್ದಧ ಚಿತ್ರಗಳ ಪರದರ್ಶನ ಕೂಡ ನಡೆಯುತ್ತಿದೆ. ಈ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ 31 ಜಿಲ್ಲೆಗಳ ಕಲೆ, ಸಾಹಿತ್ಯ ಇತಿಹಾಸವಿರುವ ಸ್ಥಬ್ದಚಿತ್ರಗಳನ್ನು ಪ್ರದರ್ಶನಗೊಳಿಸಲಾಗುತ್ತಿದೆ.
ಇನ್ನೊಂದು ವಿಶೇಷವೆಂದರೇ ಈ ಬಾರಿ ದಸರಾದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸ್ತಬ್ದ ಚಿತ್ರ ಪ್ರದರ್ಶನವೂ ಎಲ್ಲರ ಗಮನ ಸೆಳೆದಿದೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಸ್ತಬ್ಧ ಚಿತ್ರ ಸಾಗುವುದನ್ನು ಕಣ್ ತುಂಬಿಕೊಂಡರು.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಆರಂಭ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿನ್ನದ ಅಂಬಾರಿಯಲ್ಲಿನ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಈ ಬಳಿಕ ಶುಭ ಮೀನ ಲಗ್ನದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭಗೊಂಡಿತು. ಮೈಸೂರಿನ ರಾಜವಂಶಸ್ಥ ಯಧುವೀರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ಇತರರು ಹಾಜರಿದ್ದರು.
ಈ ಮಾರ್ಗದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಸಾಗಲಿದೆ
ಮೈಸೂರು ಅರಮನೆಯಿಂದ ಆರಂಭಗೊಳ್ಳಲಿರುವಂತ ಜಂಬೂಸವಾರಿಯು ಕೆ ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಆರ್ ಎಂಸಿ, ತಿಲಕ್ ನಗರ ರಸ್ತೆ ಮೂಲಕ ಬನ್ನಿ ಮಂಟಪವನ್ನು ತಲುಪಲಿದೆ.
ಸತತ ಮೂರನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಸಾಗುತ್ತಲಿರುವ ಅಭಿಮನ್ಯು
750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಸತತ ಮೂರನೇ ಬಾರಿಗೆ ಅಭಿಮನ್ಯು ಆನೆ ಹೊತ್ತು ಸಾಗುತ್ತಲಿದೆ. ಈ ಆನೆಗೆ ಕುಮ್ಕಿ ಆನೆಯಾಗಿ ಚೈತ್ರ ಹಾಗೂ ವಿಜಯಾ ಸಾಥ್ ನೀಡುತ್ತಿವೆ.
70ಕ್ಕೂ ಹೆಚ್ಚು ಕಲಾ ತಂಡಗಳ ಪ್ರದರ್ಶನ
ದಸರಾ ಜಂಬೂ ಸವಾರಿ ಮೆರವಣಿಗೆಗೂ ಮುನ್ನಾ, ಮೈಸೂರು ಅರಮನೆಯಿಂದ ಬನ್ನಿ ಮಂಟಪದವರೆಗೆ ಡೊಳ್ಳು, ವೀರಗಾಸೆ ಕುಣಿತ, ಅರೇವು, ಕಂಸಾಳೆ ಸೇರಿದಂತೆ 70ಕ್ಕೂ ಹೆಚ್ಚು ಕಲಾ ತಂಡಗಳು ತಮ್ಮ ಪ್ರದರ್ಶನವನ್ನು ನೀಡುತ್ತಾ ಸಾಗುತ್ತಲಿವೆ.
ದಸರಾ ಜಂಬೂ ಸವಾರಿ ಕಣ್ ತುಂಬಿಕೊಳ್ಳುತ್ತಿರುವ ಲಕ್ಷಾಂತರ ಜನರು
ಸಿಎಂ ಬಸವರಾಜ ಬೊಮ್ಮಾಯಿ 5.07 ರಿಂದ 5.18ರ ಶುಭ ಲಗ್ನದಲ್ಲಿ ಮೈಸೂರು ದಸರಾ ಜಂಬೂ ಸವಾರಿಗೆ ( Dasara Jamboo Savari ) ಚಾಲನೆ ನೀಡುತ್ತಿದ್ದಂತೇ, ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತಂತ ಅಭಿಮನ್ಯು ದಾರಿಯಲ್ಲಿ ಸಾಗುತ್ತಿದ್ದರೇ, ಜಂಬೂಸವಾರಿಯನ್ನು ಲಕ್ಷಾಂತರ ಜನರು ಕಣ್ ತುಂಬಿಕೊಂಡರು.