ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಇದೀಗ ಶ್ರೀಗಳ ಅಂತಿಮ ವಿಧಿ ವಿಧಾನ ನೆರವೇರುತ್ತಿದೆ. ಕೆಲವೇ ಕ್ಷಣದಲ್ಲಿ ಶ್ರೀಗಳ ಚಿತೆಗೆ ಅಗ್ಬಿಸ್ಪರ್ಶ ಮಾಡಲಾಗುತ್ತದೆ.
ಕೆಲಹೊತ್ತಿನಲ್ಲೇ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದ್ದು, ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ. ಪಾರ್ಥಿವ ಶರೀರಕ್ಕೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಪೂಜೆ ಸಲ್ಲಿಸಿದ್ದಾರೆ.
ಮರಣದ ಬಗ್ಗೆ 8 ವರ್ಷದ ಹಿಂದೆ ಭವಿಷ್ಯ ನುಡಿದಿದ್ದ ಶ್ರೀ
ತಮ್ಮ ಮರಣದ ಬಗ್ಗೆ 2014ರಲ್ಲೇ ‘ಸಿದ್ದೇಶ್ವರ ಶ್ರೀ’ಗಳು ಭವಿಷ್ಯ ನುಡಿದಿದ್ದರು ಎಂಬುದಾಗಿ ತಿಳಿದು ಬಂದಿದೆ. ಎಂಟು ವರ್ಷದ ಹಿಂದೆಯೇ ಶ್ರೀಗಳು ತಮ್ಮ ಮರಣ ಯಾವ ರೀತಿ ಇರುತ್ತೆ ಎಂದು ಹೇಳಿದ್ದರಂತೆ.
ವೈಕುಂಠ ಏಕಾದಶಿಯ ಪುಣ್ಯದಿನದಂದು (ಜ.2) ರಂದು ಶ್ರೀಗಳು ಲಿಂಗೈಕ್ಯರಾಗಿದ್ದು, ಇದು ದೇಹತ್ಯಾಗ ಎಂದು ಹೇಳಲಾಗಿದೆ. .ತಮ್ಮ ಮರಣದ ಬಗ್ಗೆ ತಾವೇ ಭವಿಷ್ಯ ನುಡಿದ್ದಿದ್ದ ಅವರು ಈ ಪುಣ್ಯದಿನದಂದು ತಮ್ಮ ದೇಹ ತ್ಯಾಗ ಮಾಡಿದ್ದಾರೆ ಎಂದು ಹಿರಿಯರು ಹೇಳಿದ್ದಾರೆ ಎನ್ನಲಾಗಿದೆ. ಮರಣದ ಬಗ್ಗೆ ತಿಳಿಸಿದ್ದ ಶ್ರೀಗಳು ನನ್ನನ್ನು ಹೂಳಬಾರದು, , ಸುಡಬೇಕು, ನನ್ನ ಕುರುಹುಗಳು ಇರಬಾರದು ಹಾಗೂ ಗುಡಿ ಕಟ್ಟಬಾರದು, ಸಮಾದಿ ಮಾಡಬಾರದು ಎಂದು ಭಕ್ತರಿಗೆ ಸೂಚನೆಗಳನ್ನು ನೀಡಿದ್ದರಂತೆ.
BIGG NEWS : ಕ್ಯಾನ್ಸರ್ ಪೀಡಿತರಿಗೆ ಗುಡ್ ನ್ಯೂಸ್ ; ಶೀಘ್ರದಲ್ಲೇ ‘ಕ್ಯಾನ್ಸರ್ ಲಸಿಕೆ’ ಲಭ್ಯ |Cancer vaccine