ಬೆಳಗಾವಿ: ರಾಜ್ಯದಲ್ಲಿ ಎದ್ದಿರುವಂತ ಪಂಚಮಸಾಲಿ ಸಮುದಾಯಗಳಿಗೆ 2ಎ ಮೀಸಲಾತಿ ಕಲ್ಪಿಸೋ ಪ್ರತಿಭಟನೆ ಬೆನ್ನಲ್ಲೇ, ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಒದಗಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನು ಮುಖಂಡರು ಸಲ್ಲಿಸಿದ್ದರು. ಈ ಬೆನ್ನಲ್ಲೇ ಇಂದು ಮಹತ್ವದ ತುರ್ತು ಸಚಿವ ಸಂಪುಟಸಭೆಯನ್ನು ಸಿಎಂ ಕರೆದಿದ್ದು, ಇಂದೇ ಮೀಸಲಾತಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಿಗ್ಗೆ 10.30ಕ್ಕೆ ತುರ್ತು ಸಚಿವ ಸಂಪುಟ ಸಭೆಯು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ. ಇಂದಿನ ಸಚಿವ ಸಂಪುಟ ಸಭೆಯು ಐತಿಹಾಸಿಕ ನಿರ್ಣಯಕ್ಕೂ ಸಾಕ್ಷಿಯಾಗಲಿದೆ ಎಂಬುದಾಗಿ ಹೇಳಲಾಗುತ್ತಿದೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ಕಲ್ಪಿಸೋ ನಿಟ್ಟಿನಲ್ಲಿಯೂ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ಅಲ್ಲದೇ ಮೀಸಲಾತಿ ಕಲ್ಪಿಸೋ ಸಂಬಂಧ ಪ್ರತ್ಯೇಕ ಪ್ರವರ್ಗ ರಚಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕೆಲವೇ ಗಂಟೆಗಳಲ್ಲಿ ಮಾಹಿತಿ ಹೊರ ಬೀಳಲಿದೆ.
‘ಮದ್ಯವ್ಯಸನಿ ಅಧಿಕಾರಿ’ಗಿಂತ ವ್ಯಸನಿಯಲ್ಲದ ‘ಆಟೋ ರಿಕ್ಷಾ’ ಚಾಲಕ, ಇಲ್ಲವೇ ‘ಕೂಲಿ ಕಾರ್ಮಿಕ’ ಉತ್ತಮ ವರ – ಕೇಂದ್ರ ಸಚಿವ
ಇಂದು ದೆಹಲಿಯ ‘ವೀರ್ ಬಾಲ್ ದಿವಸ್’ ಕಾರ್ಯಕ್ರಮದಲ್ಲಿ ‘ಪ್ರಧಾನಿ ಮೋದಿ’ ಭಾಗಿ | Veer Bal Diwas Programme
BIGG NEWS : ಮೈಸೂರಿನ ವಸತಿ ಶಾಲೆಯಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಬಾಲಕ ಸಾವು