ಮಂಡ್ಯ : ಮಳವಳ್ಳಿಯಲ್ಲಿ ಇತ್ತೀಚೆಗೆ ಅತ್ಯಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಕುಟುಂಬದವರಿಗೆ ರೂ. 10 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? – ಕಾಂಗ್ರೆಸ್ ಪ್ರಶ್ನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶ್ರೀ ಮಲೆಮಹಾದೇಶ್ವರ ಕುಂಭಮೇಳದ ಸಾಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಮಳವಳ್ಳಿ ಘಟನೆ ಬಗ್ಗೆ ಎಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಎಂದಿಗೂ ಇಂಥದ್ದು ನಡೆಯಬಾರದು. ಅತ್ಯಂತ ಅಮಾನುಷ ಕೃತ್ಯವಿದು. ಮನುಷ್ಯತ್ವವಿಲ್ಲದವರು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ . ಇದನ್ನು ಶಬ್ದಗಳಲ್ಲಿ ಖಂಡಿಸಲಾಗದು. ಅರಿಯದ ಕಂದಮ್ಮನ ಪರಿಸ್ಥಿತಿ ಕೇಳಿದರೆ ಕರಳು ಕಿವುಚಿಬರುತ್ತದೆ. ಈಗಾಗಲೇ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅಪರಾಧಿಯನ್ನು ಬಂಧಿಸಲಾಗಿದೆ. ಎಲ್ಲ 302, 307, ಪೋಕ್ಸೋ ಸೆಕ್ಷನ್ ಗಳನ್ನು ಹಾಕಿ ದ್ದಾರೆ. ನಮ್ಮ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ ಸೂಚನೆ ನೀಡಿ ಕೂಡಲೇ ತನಿಖೆಯಾಗಿ ತಪ್ಪಿ ತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಸೂಚಿಸಿದ್ದೆ. ಅವರು ಎಫ್.ಎಸ್.ಎಲ್ ವರದಿ ಒಂದು ವಾರದಲ್ಲಿಯೇ ನೀಡಲಾಗುವುದೆಂದು ಹೇಳಿದ್ದು, ಬಂದ ಕೂಡಲೇ ಆರೋಪ ಪಟ್ಟಿ ಸಿದ್ಧಪಡಿಸಿ ಪೋಕ್ಸೋ ನ್ಯಾಯಾಲಯಕ್ಕೆ ಕಳುಹಿಸಿ, ಆದಷ್ಟು ಬೇಗ ನ್ಯಾಯ ನೀಡಲು ಕ್ರಮ ಕೈಗೊಂಡು ಇನ್ನೊಮ್ಮೆ ಹೀಗಾದರೆ ಅತಿ ಕಡಿಮೆ ಸಮಯದಲ್ಲಿ ಉಗ್ರ ಶಿಕ್ಷೆ ಈ ವ್ಯವಸ್ಥೆ ನೀಡಲಿದೆ ಎಂಬ ಸಂದೇಶವನ್ನು ಸಾರಲಾಗುವುದೆಂದು ಈ ಪ್ರಕರಣದಲ್ಲಿ ಸಾಬೀತು ಮಾಡುತ್ತೇವೆ ಎಂದರು.
ಉಗ್ರ ಶಿಕ್ಷೆ
ಅಪರಾಧಿಗೆ ಉಗ್ರ ಶಿಕ್ಷೆ ನೀಡಲಾಗುವುದು. ನಿಮ್ಮ ಮನಸ್ಸಿನಲ್ಲಿರುವುದೇ ನಮ್ಮ ಮನಸ್ಸಿನಲ್ಲಿದೆ. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಮೌಲ್ಯಗಳ ಕುಸಿತದಿಂದ ಇವೆಲ್ಲಾ ಆಗುತ್ತಿದೆ. ಯಾವುದು ಸರಿ, ತಪ್ಪು ಎಂದು ಸ್ಪಷ್ಟ ತೆ ಇಲ್ಲ. ಭಯ, ಭಕ್ತಿ ಇಲ್ಲ. ಇವುಗಳು ಇರಬೇಕಾದರೆ ಸಂಸ್ಕಾರ , ಸಂಸ್ಕೃತಿ ಅಗತ್ಯ. ಅಮಾನುಷ ಕೃತ್ಯ ಸಮಾಜದಲ್ಲಿ ಆಗಬಾರದೆಂದರೆ ನೈತಿಕ ಬದ್ಧತೆ, ಭಯ ಬರಬೇಕಾದರೆ ಸಂಸ್ಕಾರ ಅಗತ್ಯ ಎಂದರು. ನಾವೇನಾಗಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಕೇಳಿಕೊಳ್ಳಬೇಕು ಎಂದರು.
ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರ
ಮಳೆ ಕರ್ನಾಟಕದ ಉದ್ದಗಲಕ್ಕೂ ಆಗುತ್ತಿದೆ. ಕೆರೆಕಟ್ಟೆಗಳು ತುಂಬಿವೆ.ಆದರೆ ಕೆಲವು ಕಡೆ ಪ್ರವಾಹ ಆಗಿದೆ. ಜನವಸತಿ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿದೆ. ಮಂಡ್ಯಕ್ಕೆ ಸಂಬಂಧಿಸಿದಂತೆ ವೀಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರವನ್ನು ಒದಗಿಸಲಾಗಿದೆ. ಅದರ ಜೊತೆಗೆ ಇಬ್ಬರು ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿದೆ. ಬಿದ್ದುಹೋಗಿದ್ದ 304 ಮನೆಗಳಿಗಳಿಗೆ 100ಕ್ಕೆ 100 ಪರಿಹಾರ ನೀಡಲಾಗಿದೆ. ಮತ್ತೆ ಒಂದು ವಾರದಿಂದ ಆಗುತ್ತಿರುವ ಮಳೆಗೆ ಕೂಡಲೇ ಬೆಲೆ ನಾಶ, ಮನೆಗಳಿಗೆ ಸಂಬಂಧಿಸಿದಂತೆ ವರದಿ ನೀಡಿದರೆ ಕೂಡಲೇ ಪರಿಹಾರ ನೀಡಲಾಗುವುದು ಎಂದರು.
ಬೆಳೆ ನಾಶ ಆದಾಗ ಒಂದೂವರೆ ವರ್ಷ ಆಗುತ್ತಿತ್ತು. ನಾನು ಮುಖ್ಯ ಮಂತ್ರಿ ಆದಾಗಿನಿಂದ ಒಂದೂವರೆ ತಿಂಗಳಲ್ಲಿ ಡಿಬಿಟಿ ಮುಖಾಂತರ ಪರಿಹಾರ ವಿತರಣೆಯಾಗುತ್ತಿದೆ ಎಂದರು. ಖಾತೆಗಳಿಗೆ ನೇರವಾಗಿ ಹೋಗುತ್ತಿದೆ. ಪರಿಹಾರವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಒಣಬೇಸಾಯಕ್ಕೆ 13600ರೂ., ನೀರಾವರಿಗೆ 25 ಸಾವಿರ ಪರಿಹಾರ ನೀಡುತ್ತಿದ್ದೇವೆ. ತೋಟಗಳಿಗೆ ಕೇಂದ್ರ 18 ಸಾವಿರ ರೂ.ಗಳನ್ನು ನೀಡಿದರೆ ರಾಜ್ಯ ಸರ್ಕಾರ 28 ಸಾವಿರ ರೂ.ಗಳನ್ನು ನೀಡುತ್ತಿದೆ . ಮನೆಗಳಿಗೆ ಕೇಂದ್ರ ಸರ್ಕಾರ 95 ಸಾವಿರ ರೂ. ನೀಡುತ್ತದೆ. ನಾವು ಪೂರ್ಣ ಬಿದ್ದಿರುವ ಮನೆಗಳಿಗೆ 5 ಲಕ್ಷ, ಭಾಗಶಃ ಹಾಳಾಗಿರುವ ಮನೆಗಳಿಗೆ 3 ಲಕ್ಷ, ಹಾಗೂ ಸ್ವಲ್ಪ ಹಾಳಾಗಿರುವ ಮನೆಗಳಿಗೆ 50 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೀಗೆ ಕಷ್ಟದಲ್ಲಿರುವ ಜನರಿಗೆ ನೆರ ವಾಗುತ್ತಿದ್ದೇವೆ ಎಂದರು. ಹಿಂದೆ ಈ ರೀತಿ ಪ್ರಕ್ರಿಯೆಗಳಾಗುತ್ತಿರಲಿಲ್ಲ. ಮನೆಗಳ ಜೊತೆಗೆ ಬೆಳೆಗಳ ನಾಶಕ್ಕೆ ಎರಡು ಪಟ್ಟುಪರಿಹಾರ ನೀಡುತ್ತಿರುವುದು ಬಿಜೆಪಿ ಸರ್ಕಾರ. ರೈತರ ಪರವಾಗಿ ನಾವು ಇದ್ದು, ಏನೇ ಸಂಕಷ್ಟ ಬಂದರೂ ಅವರೊಂದಿಗೆ ನಿಲ್ಲುತ್ತೇವೆ ಎಂದರು.
ರಾಷ್ಟ್ರೀಯ ಹೆದ್ದಾರಿ: ಶೀಘ್ರ ಕ್ರಮ
ರಾಷ್ಟ್ರೀಯ ಹೆದ್ದಾರಿ ಗಳ ಬಗ್ಗೆ ಇದೇ ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಬೆಂಗಳೂರು- ಮೈಸೂರಿ ಹೆದ್ದಾರಿಯಲ್ಲಿ ಪದೇ ಪದೇ ನೀರು ನಿಂತು ತೊಂದರೆಯಾಗುತ್ತಿದ್ದು, ಇದರಲ್ಲಿ ವಿನ್ಯಾಸದ ಸಮಸ್ಯೆಯೋ ಅಥವಾ ನಿರ್ವಹಣೆಯ ಸಮಸ್ಯೆಯೂ ಎಂದು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ನೀರು ಬರದಂತೆ ವಿಶೇಷ ವ್ಯವಸ್ಥೆ ಮಾಡಿ, ಬ್ಲಾಕ್ ಸ್ಟಾಟ್ ಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.