ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕಾನ್ಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ನಡುವೆ ಗಲಾಟೆ ನಡೆದಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಅಗಿದೆ.
कानपुर में एक नामी निजी स्कूल की इन लड़कियों की ये पटकम-पटकाई का वीडियो खूब वायरल हो रहा है। हाईस्कूल की ये स्टूडेंट्स स्कूल ऑवर्स में ही एक दूसरे से भिड गईं।#Kanpur pic.twitter.com/BQGyza6Rqd
— Amit Singh (@amit3_singh) August 27, 2022
ಶಾಲಾ ಸಮವಸ್ತ್ರವನ್ನು ಧರಿಸಿರುವ 3 ವಿದ್ಯಾರ್ಥಿನಿಯರು ಪರಸ್ಪರ ಕೂದಲನ್ನು ಎಳೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಥಳಿಸಿದ್ದಾರೆ. ಕ್ಲಾಸ್ನಲ್ಲಿದ್ದ ಇತರ ವಿದ್ಯಾರ್ಥಿನಿಯರು ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಕೆಲವರು ಮಧ್ಯಪ್ರವೇಶಿಸಿ ಜಟಾಪಟಿಗಿಳಿದಿದ್ದವರನ್ನು ದೂರ ಸರಿಸಲು ಸಹ ಯತ್ನಿಸಿದ್ದಾರೆ.
ಆದರೆ ವಿದ್ಯಾರ್ಥಿನಿಯರ ಕಿತ್ತಾಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ವಿಡಿಯೋವನ್ನು ಪತ್ರಕರ್ತ ಅಮಿತ್ ಸಿಂಗ್ ಶೇರ್ ಮಾಡಿದ್ದಾರೆ. ಕಾನ್ಪುರದ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿನಿಯರು ಅಂತಾ ಬರೆದುಕೊಂಡಿದ್ದಾರೆ. ಈಗಾಗಲೇ ಸುಮಾರು 90 ಸಾವಿರ ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ ಈ ಜಡೆಜಗಳಕ್ಕೆ ಕಾರಣವೆನೆಂದು ತಿಳಿದುಬಂದಿಲ್ಲ.