ಚಿತ್ರದುರ್ಗ : ಇತ್ತೀಚಿಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಯುವಕನೊಬ್ಬ ಗೆಳೆಯನ ಮದುವೆ ವೇಳೆ ಡಿಜೆ ಹಾಡಿಗೆ ಕುಣಿಯುತ್ತ ಕುಸಿದುಬಿದು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡಿ ಗ್ರಾಮದಲ್ಲಿ ನಡೆದಿದೆ.
ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡಿ ಗ್ರಾಮದಲ್ಲಿ ಆದರ್ಶ್ (25) ಎನ್ನುವ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಪಗಡಲಬಂಡಿ ಗ್ರಾಮದ ಆದರ್ಶ ಗೆಳೆಯನ ಮದುವೆ ಮೆರವಣಿಗೆ ವೇಳೆ ಡಿಜಿ ಸೌಂಡ್ ಗೆ ಕುಣಿದಿದ್ದಾನೆ.
ಈ ವೇಳೆ ಡ್ಯಾನ್ಸ್ ಕುಣಿಯುತ್ತಲೇ ಕುಸಿದು ಬಿದ್ದಿದ್ದಾನೆ. ಆದರ್ಶನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಪರಶುರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆದರ್ಶ ಸಾವನ್ನಪ್ಪಿದ್ದಾನೆ. ನವೆಂಬರ್ 14 ರಂದು ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.