ಶಿವಮೊಗ್ಗ : ಜಿಲ್ಲೆಯ ಪ್ರಸಿದ್ಧ ಭದ್ರಾ ಜಲಾಶಯಕ್ಕೆ ( Badra Dam ) ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಡ್ಯಾಂನಿಂದ ಹೊರಬಿಟ್ಟಿರುವ ಜಲರಾಶಿ ಸೊಬಗು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ದೌಡಾಯಿಸಿದ್ದರು. ಈ ಹಿನ್ನಲೆಯಲ್ಲಿ ಭದ್ರಾ ಜಲಾಶಯ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಕಿರಿಕಿರಿ ಅನುಭವಿಸಿದಂತ ಘಟನೆ ನಡೆಯಿತು.
BREAKING NEWS: ಚಿತ್ರದುರ್ಗದ ಸ್ವಾಮೀಜಿ, ಶಾಸಕರಿಗೆ ಕೊಲೆ ಬೆದರಿಕೆ: ಚಿಕ್ಕಬಳ್ಳಾಪುರದಲ್ಲಿ ವೈದ್ಯ ಅರೆಸ್ಟ್
ಇಂದು ವಾರಾಂತ್ಯ ದಿನವಾದ ಕಾರಣ, ಜಿಲ್ಲೆಯ ತರೀಕೆರೆ ತಾಲೂಕಿನ ಬಿ ಆರ್ ಪಿ ಸಮೀಪದಲ್ಲಿರುವಂತ ಭದ್ರಾ ಜಲಾಶಯ ನೋಡೋದಕ್ಕೆ ನೂರಾರು ಪ್ರವಾಸಿಗರು ಆಗಮಿಸಿದ್ದರು. ತರೀಕೆರೆ-ಶಿವಮೊಗ್ಗ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ, ಭದ್ರಾ ಜಲಾಶಯದ ನೀರಿನ ನೋಟವನ್ನು ಸವಿಯುತ್ತಾ ನಿಂತ ಕಾರಣ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಕಂಡು ಬಂದಿತು.
BIG NEWS: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲ್ಲ – ಸಿದ್ಧರಾಮಯ್ಯ ಬಹಿರಂಗವಾಗಿ ಘೋಷಣೆ
ಟ್ರಾಫಿಕ್ ಜಾಮ್ ನಿಂದಾಗಿ ಆ್ಯಂಬುಲೆನ್ಸ್ ಕೂಡ ಕೆಲ ಕಾಲ ಜಾಮ್ ನಲ್ಲಿ ಸಿಲುಕುವಂತೆ ಆಯ್ತು. ಸ್ಥಳದಲ್ಲಿದ್ದಂತ ಸ್ಥಳೀಯರು, ಪ್ರವಾಸಿಗರೇ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಇನ್ನೂ ಸ್ಥಳದಲ್ಲಿ ಸೂಕ್ತ ಭದ್ರತಾ ಸಿಬ್ಬಂದಿಗಳ ಕೊರತೆ, ವಾಹನಗಳ ನಿಲುಗಡೆಗೆ ವ್ಯವಸ್ಥೆಯಿಲ್ಲದಿರುವುದರಿಂದ ತೊಂದರೆ ಎದುರಿಸುವಂತಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ.
ವರದಿ: ಬಿ.ರೇಣುಕೇಶ್, ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯಕ್ಕೆ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಇದು ಡ್ಯಾಂ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಭಾನುವಾರ ಸಂಜೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರವಾಸಿಗರು ಪರದಾಡುವಂತಾಯಿತು. @KarnatakaWorld @tourismgoi @CMofKarnataka #BhadraDam #ಭದ್ರಾಡ್ಯಾಂ #ಭದ್ರಾಜಲಾಶಯ pic.twitter.com/ERcJuvxyBb
— B. Renukesha (ಬಿ.ರೇಣುಕೇಶ್) Shivamogga (@renukesh9) July 17, 2022