ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಬೆಸ್ಕಾಂನಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂಬುದಾಗಿ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅಧಿಕಾರಿ ಪೀರ್‌ಸಾಬ್.ಹಚ್ ಅವರು, ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಬೃಹತ್ ಕಾಮಗಾರಿ ವಿಭಾಗ ಕವಿಪ್ರನಿನಿ ತುಮಕೂರು ಅವರು, ಹಿರಿಯೂರು-ಶಿರಾ 66 ಕೆಪಿ ಏಕಮುಖ ಪ್ರಸರಣ ಮಾರ್ಗವನ್ನು ದ್ವಿಮುಖ ಗೋಪುರಗಳ ಮೇಲೆ ಅಳವಡಿಸುವ ಕಾಮಗಾರಿಯು ಹಿರಿಯೂರು ಷುಗರ್ ಫ್ಯಾಕ್ಟರಿ ಹತ್ತಿರ ದಿನಾಂಕ 22-10-2024ರಂದು ಹಮ್ಮಿಕೊಂಡಿರುವ ಪ್ರಯುಕ್ತ ಹಿರಿಯೂರು 66/11 ಕೆವಿ ವಿದ್ಯುತ್ ಉಪ ಕೇಂದ್ರದ ಮಾರ್ಗಮುಕ್ತತೆ ನೀಡಬೇಕೆಂದು ತಿಳಿಸಿರುತ್ತಾರೆ ಎಂದಿದ್ದಾರೆ.
ಈ ಪ್ರಯುಕ್ತ ದಿನಾಂಕ:-22.10.2024 ರಂದು ಹಿರಿಯೂರು 66/11 ಕೆ ವಿ ವಿ ವಿ ಕೇಂದ್ರದ ಎಲ್ಲಾ 11 ಕೆವಿ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಬೆಳಿಗ್ಗೆ: 09.00 ರಿಂದ ಸಂಜೆ: 05.00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ನಾಳೆ ಹಿರಿಯೂರು ತಾಲ್ಲೂಕಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಹಿರಿಯೂರು ಗ್ರಾಮೀಣದ ಕೈಗಾರಿಕಾ ಪ್ರದೇಶಗಳಾದ ಹಿರಿಯೂರು ನಗರ, ಆಕ್ಷಯಮುಡ್ ಪಾರ್ಕ, ಹಬೀಬ್ ಸಾಲ್ವೆಂಟ್, ಪಿ.ಜಿ.ಸಿ.ಎಲ್, ವಿ.ವಿ.ಕ್ರಾಸ್, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸಿಗೇಹಟ್ಟಿ, ಕೂನಿಕೆರೆ, ಬಟ್ಟೂರು, ತೋಟಗಾರಿಕಾ ವಿಶ್ವವಿದ್ಯಾನಿಲಯ, ಆದಿವಾಲ, ಆದಿವಾಲ ಪಾರಂ, ಪಹಳ್ಳಿ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?
BREAKING: ‘545 PSI ಹುದ್ದೆ’ಗಳ ನೇಮಕಾತಿಗೆ ‘ತಾತ್ಕಾಲಿಕ ಆಯ್ಕೆ ಪಟ್ಟಿ’ ಪ್ರಕಟ | PSI Recruitment 2024