Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮೆದುಳಿನ ಜೀವಕೋಶಗಳ ಪುನರುಜ್ಜೀವನಕ್ಕೆ ವಿಟಮಿನ್ K ಆಧಾರಿತ ಹೊಸ ಸಂಯುಕ್ತಗಳ ಆವಿಷ್ಕಾರ!

Watch video: ಅಹ್ವಾನವಿಲ್ಲದೆ ಮದುವೆಗೆ ಬಂದು 10 ರೂಪಾಯಿ ಕಾಣಿಕೆ ನೀಡಿದ ವ್ಯಕ್ತಿ: ಅಸ್ಸಾಂನ ಈ ಹೃದಯಸ್ಪರ್ಶಿ ವಿಡಿಯೋ ವೈರಲ್!

QR Code Scam: ನಕಲಿ QR ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡ್ರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಸಿಗುತ್ತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಯಾಣಿಕರಿಗೆ ಗುಡ್ ನ್ಯೂಸ್: ದೀಪಾವಳಿ ಹಬ್ಬದ ಪ್ರಯುಕ್ತ ಈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ | South Western Railway
KARNATAKA

ಪ್ರಯಾಣಿಕರಿಗೆ ಗುಡ್ ನ್ಯೂಸ್: ದೀಪಾವಳಿ ಹಬ್ಬದ ಪ್ರಯುಕ್ತ ಈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ | South Western Railway

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಿದೆ.

ಈ ಕುರಿತಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಮನವಿ ಮೇರೆಗೆ ನೈಋತ್ಯ ರೈಲ್ವೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು – ಚೆನ್ನೈ ಎಗ್ಮೋರ್ ನಿಲ್ದಾಣಗಳ ನಡುವೆ ಎರಡು ಟ್ರಿಪ್ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಹೀಗಿವೆ ದೀಪಾವಳಿ ಹಬ್ಬದ ಪ್ರಯುಕ್ತ ಸಂಚರಿಸಲಿರುವಂತ ವಿಶೇಷ ರೈಲುಗಳು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಚೆನ್ನೈ ಎಗ್ಮೋರ್ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06209/06210) ರೈಲು ಸಂಚಾರ

ರೈಲು ಸಂಖ್ಯೆ 06209 ಅಕ್ಟೋಬರ್ 30 ಮತ್ತು ನವೆಂಬರ್ 3, 2024 ರಂದು ಬೆಳಿಗ್ಗೆ 8:05 ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಅದೇ ದಿನ ಮಧ್ಯಾಹ್ನ 2:30 ಕ್ಕೆ ಚೆನ್ನೈ ಎಗ್ಮೋರ್ ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06210 ಚೆನ್ನೈ ಎಗ್ಮೋರ್ ನಿಲ್ದಾಣದಿಂದ ಅಕ್ಟೋಬರ್ 30 ಮತ್ತು ನವೆಂಬರ್ 3, 2024 ರಂದು ಮಧ್ಯಾಹ್ನ 3:55 ಕ್ಕೆ ಹೊರಟು, ಅದೇ ದಿನ ರಾತ್ರಿ 10:50 ಕ್ಕೆ ಕೆಎಸ್ಆರ್ ಬೆಂಗಳೂರು ಆಗಮಿಸಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಯಶವಂತಪುರ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟ್ಪಾಡಿ, ಅರಕ್ಕೋಣಂ ಮತ್ತು ಪೆರಂಬೂರು ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.

ಈ ರೈಲು 1 ಎಸಿ ಟು ಟೈಯರ್, 1 ಎಸಿ ತ್ರಿ ಟೈಯರ್, 11 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ / ಬ್ರೇಕ್ ವ್ಯಾನ್ ಸೇರಿದಂತೆ 19 ಬೋಗಿಗಳನ್ನು ಒಳಗೊಂಡಿರುತ್ತದೆ.

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (07311/07312) ರೈಲು ಸಂಚಾರ

ರೈಲು ಸಂಖ್ಯೆ 07311 ನವೆಂಬರ್ 2, 2024 ರಂದು ಶ್ರೀ ಸಿದ್ದಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು, ಮರುದಿನ ದಿನ ಬೆಳಗ್ಗೆ 11.25 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07312 ನವೆಂಬರ್ 3, 2024 ರಂದು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಮರುದಿನ ಅಂದರೆ ನ.4 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಸಿದ್ಧಾರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟವಾಳ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.

ಈ ರೈಲಿನಲ್ಲಿ 1 ಎಸಿ ಟು ಟೈಯರ್, 2 ಫಸ್ಟ್ ಎಸಿ ಕಮ್ ಎಸಿ ತ್ರಿ ಟೈಯರ್, 3 ಎಸಿ ತ್ರಿ ಟೈಯರ್, 5 ಸ್ಲೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ / ಬ್ರೇಕ್ ವ್ಯಾನ್ ಬೋಗಿಗಳು ಸೇರಿದಂತೆ 15 ಬೋಗಿಗಳು ಇರಲಿವೆ.

ಈ ವಿಶೇಷ ರೈಲುಗಳು ಹಬ್ಬದ ಋತುವಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವರ್ಧಿತ ಸಂಪರ್ಕ ಮತ್ತು ಅನುಕೂಲವನ್ನು ಒದಗಿಸುತ್ತವೆ.

ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BIG NEWS: ಹಾಸನಾಂಬ ದೇವಾಲಯ ಓಪನ್ ಗೆ ಮುಹೂರ್ತ ಫಿಕ್ಸ್: ಅ.24ರಂದು ಮಧ್ಯಾಹ್ನ 12ಕ್ಕೆ ಬಾಗಿಲು ಓಪನ್

ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?

Share. Facebook Twitter LinkedIn WhatsApp Email

Related Posts

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ: ಕುರಿಗಾಯಿಯಿಂದ ಸಿಎಂ ಪಟ್ಟದವರೆಗಿನ ಸ್ಫೂರ್ತಿದಾಯಕ ಪಯಣ

2 Mins Read

ಶಿವಮೊಗ್ಗ: ಮೇ.30ರಂದು ಸೊರಬ ಪಟ್ಟಣ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

1 Min Read

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್: ವಿದೇಶ ಪ್ರವಾಸಕ್ಕೆ ಅನುಮತಿ

1 Min Read
Recent News

​ಮೆದುಳಿನ ಜೀವಕೋಶಗಳ ಪುನರುಜ್ಜೀವನಕ್ಕೆ ವಿಟಮಿನ್ K ಆಧಾರಿತ ಹೊಸ ಸಂಯುಕ್ತಗಳ ಆವಿಷ್ಕಾರ!

Watch video: ಅಹ್ವಾನವಿಲ್ಲದೆ ಮದುವೆಗೆ ಬಂದು 10 ರೂಪಾಯಿ ಕಾಣಿಕೆ ನೀಡಿದ ವ್ಯಕ್ತಿ: ಅಸ್ಸಾಂನ ಈ ಹೃದಯಸ್ಪರ್ಶಿ ವಿಡಿಯೋ ವೈರಲ್!

QR Code Scam: ನಕಲಿ QR ಕೋಡ್ ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡ್ರಾ? ಹೀಗೆ ಮಾಡಿದರೆ ನಿಮ್ಮ ಹಣ ವಾಪಸ್ ಸಿಗುತ್ತೆ!

20 ವರ್ಷಗಳ ಬಳಿಕ ಮತ್ತೆ ಜಪಾನ್‌ನಿಂದ ಭಾರತೀಯ ಮಾವಿನ ಹಣ್ಣುಗಳ ಆಮದಿಗೆ ತಡೆ: ಕಾರಣವೇನು?

State News
KARNATAKA

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ: ಕುರಿಗಾಯಿಯಿಂದ ಸಿಎಂ ಪಟ್ಟದವರೆಗಿನ ಸ್ಫೂರ್ತಿದಾಯಕ ಪಯಣ

By ಗೋಪಾಲ್‌ ಎನ್‌ KARNATAKA 2 Mins Read

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಮೇ 28, 2026) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಉಪ…

ಶಿವಮೊಗ್ಗ: ಮೇ.30ರಂದು ಸೊರಬ ಪಟ್ಟಣ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್: ವಿದೇಶ ಪ್ರವಾಸಕ್ಕೆ ಅನುಮತಿ

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.