ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯ ( Vanivilasa Dam ) ಭರ್ತಿಗೆ ಕ್ಷಣಗಣನೆ ಆರಂಭಗೊಂಡಿದೆ. ಮಾರಿಕಣಿವೆ ಡ್ಯಾಂ ಭರ್ತಿಗೆ ಕೇವಲ 1.30 ಅಡಿ ಮಾತ್ರವೇ ಬಾಕಿ ಇದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್: ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಶುಲ್ಕ
ವಾಣಿವಿಲಾಸ ಡ್ಯಾಂ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಳೆಯಿಂದಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದೀಗ ಡ್ಯಾಂಗೆ 2091 ಕ್ಯೂಸೆಕ್ ಒಳಹರಿವು ಬರುತ್ತಿದೆ. ಹೀಗಾಗಿ 128.70 ಅಡಿಯ ಜಲಾಶಯ ಮಟ್ಟದಲ್ಲಿ ಭರ್ತಿಗೆ 1.30 ಅಡಿ ನೀರು ಮಾತ್ರವೇ ಬಾಕಿ ಇದೆ.
ಇನ್ನೂ 1.30 ಅಡಿ ನೀರು ಮಾರಿ ಕಣಿವೆ ಡ್ಯಾಂಗೆ ಹರಿದು ಬಂದ್ರೇ, ಜಲಾಶಯ ಭರ್ತಿಯಾಗಲಿದ್ದು, ಕೋಡಿ ಕೂಡ ಬೀಳಲಿದೆ. ಹೀಗಾಗಿ ವಾಣಿವಿಲಾಸ ಡ್ಯಾಂ ನೀರು ಬಳಕೆದಾರ ರೈತರಲ್ಲಿ ಸಂತಸ ಮನೆ ಮಾಡಿದೆ.
ಬೆಂಗಳೂರಿನಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಆಫ್ರಿಕನ್ ಮಹಿಳೆಯರಿಂದ ಕಿರಿಕ್: ಪೊಲೀಸರ ಮೇಲೆ ಹಲ್ಲೆಗೂ ಯತ್ನ.?