ಚಿತ್ರದುರ್ಗ: ಕಳೆದು ಹೋಗಿದ್ದಂತ ತಮ್ಮ ಮೊಬೈಲ್ ಹುಡುಕಿ ಕೊಡುವಂತೆ ಠಾಣೆಗೆ ದೂರು ನೀಡಿದ್ದ ಆ ವ್ಯಕ್ತಿಯಿಂದ, ಮೊಬೈಲ್ ಹುಡುಕಿ ಕೊಡೋದಕ್ಕೆ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಠಾಣೆಯ ಪಿಸಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
BREAKING NEWS : ವಿದೇಶಕ್ಕೆ ತೆರಳಲು ಮಾಜಿ ಸಚಿವ ರೋಷನ್ ಬೇಗ್ ಗೆ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್ |Roshan baig
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದು ಹೋದ ಮೊಬೈಲ್ ಹುಡುಕಿ ಕೊಡುವಂತೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆದ್ರೇ ಇದೇ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಹರೀಶ್ ಎಂಬುವರು ಕಳೆದು ಹೋದಂತ ಮೊಬೈಲ್ ಹುಡುಕಿ ಕೊಡಲು 5 ಸಾವಿರ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.
ಮುಂದಿನ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತೆ: ಸಿದ್ಧು ವಿರುದ್ಧ ಗುಡುಗಿದ ನಳೀನ್ ಕುಮಾರ್ ಕಟೀಲ್
ಮೊಬೈಲ್ ಕಳೆದುಕೊಂಡಿದ್ದಂತ ವ್ಯಕ್ತಿ, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈಗಾಗಲೇ 3 ಸಾವಿರ ಹಣವನ್ನು ಮುಂಗಡವಾಗಿ ಪಿಸಿ ಹರೀಶ್ ಸ್ವೀಕರಿಸಿದ್ದರು. ಇಂದು ಬಾಕಿ 2 ಸಾವಿರ ರೂ ಪಡೆಯುತ್ತಿದ್ದಾಗ ಡಿವೈಎಸ್ಪಿ ಜಿ ಮಂಜುನಾಥ್ ನೇತೃತ್ವದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.