ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಬಳಿಯ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಪ್ರಸಿದ್ಧ ಕೇತೇದೇವರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ನಡೆಸಲು ನಿಗದಿ ಮಾಡಲಾಗಿದೆ. ಡಿಸೆಂಬರ್ 22ರಂದು ಹುರುಳಿ ಕೈ ತೊಳೆಯುವ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ.
ಈ ಕುರಿತಂತೆ ಚನ್ನಮ್ಮನಾಗತಿಹಳ್ಳಿಯ ಕೇತೇದೇವಸ್ಥಾನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 23ರಂದು ಹದಿಮೂರು ಗುಡಿಗಟ್ಟಿನ ಎಲ್ಲಾ ಭಕ್ತಾಧಿಗಳು ಹುರುಳಿ ಕೈ ತೊಳೆಯುವುದು ಎಂಬುದಾಗಿ ತಿಳಿಸಲಾಗಿದೆ.
‘ಕಾಂಗ್ರೆಸ್ ಪಕ್ಷ’ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿದೆ – ಡಿಕೆಶಿ
ದಿನಾಂಕ 29-12-2022ರಂದು ದೇವರ ಪೂಜೆ ಮರವನ್ನು ಕಡಿದು ಪುರ್ಲೆಹಳ್ಳಿಯ ವಸಲು ದಿನ್ನೆಯಲ್ಲಿ ಇಡಲಾಗುವುದು. ದಿನಾಂಕ 01-01-2023ರಂದು ದೇವಸ್ಥಾನದ ಸುತ್ತಲೂ ಕಳ್ಳೆ ಬೇಲಿ ಕಟ್ಟಲು ಕಳ್ಳೇ ಕಡಿಯಲಾಗುತ್ತದೆ.
ದಿನಾಂಕ 04-01-2023ರಂದು ಎರೆದ ಕಳ್ಳೆಯಿಂದ ಗುಡಿಕಟ್ಟಿದ ನಂತ್ರ ಕಲಶ ಸ್ಥಾಪನೆ ಮಾಡಲಾಗುತ್ತದೆ. ದಿನಾಂಕ 05-01-2023ರಂದು ಕ್ಯಾತಗೊಂಡನಹಳ್ಳಿಯ ಶ್ರೀ ಕಾಟಂದೇವರು, ಶ್ರೀವೀರಣ್ಣದೇವರು, ಶಅರೀ ಐತವಿನದೇವರು ಮತ್ತು ಐಗಾರ್ಲಹಳ್ಳಿ ಶ್ರೀ ತಾಳಿದೇವರು, ಚೆನ್ನಮ್ಮನಾಗತಿಹಳ್ಳಿಯ ಶ್ರೀ ಕೇತೇದೇವರ ದೇವಸ್ಥಾನಕ್ಕೆ ಬರಲಿವೆ. ಅಲ್ಲಿಂದ ಎಲ್ಲಾ ದೇವರುಗಳು ಮಜ್ಜನಬಾವಿಗೆ ಹೋಗಿ,ಗಂಗಾಪೂಜೆ ಪೂರೈಸಿ, ಸಾಯಂಕಾಲ ಪುರ್ಲೆಹಳ್ಳಿಯ ಗುಡಿಯಲ್ಲಿ ಸ್ಥಾಪನೆ ಮಾಡಲಾಗುವುದಾಗಿ ತಿಳಿಸಿದ್ದಾರೆ.
ಮಂಡ್ಯದ ಮದ್ದೂರು ಬಳಿಯ ಎಲಿವೇಟೆಡ್ ರಸ್ತೆಯಲ್ಲಿ ಕೆಟ್ಟು ನಿಂತ ಮಾಜಿ ಸಿಎಂ ಎಸ್.ಎಂ ಕೃಷ್ಣ ಕಾರು | SM Krishna
ದಿನಾಂಕ 06-01-2023ರಂದು ಹುತ್ತದ ಪೂಜೆ, ದಿನಾಂಕ 07-01-2023ರಂದು ಏಳು ಮಂದಿ ಅಕ್ಕಮ್ಮಗಳ ದೇವಸ್ಥಾನದಲ್ಲಿ ಹಾವಿನಗೂಡು ಮತ್ತು ಮಜ್ಜನಬಾವಿ ಪೂಜೆ ಮಾಡಲಾಗುವುದು. ದಿನಾಂಕ 08-01-2023ರಂದು ಅನ್ನ ನೈವೇದ್ಯ ದಾಸೋಹ ನಡೆಸಲಾಗುತ್ತದೆ. ದಿನಾಂಕ 09-01-2023ರಂದು ಎರೆದ ಕಳ್ಳೆಯ ಗುಡಿ ಹತ್ತಿ, ಕಳ ಇಳಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ದಿನಾಂಕ 12-01-2023ರಂದು ಹುರುಳಿಧಾನ್ಯದ ನೈವೇದ್ಯ ಮಾಡಿ ವ್ರತ ಕಂಕಣ ವಿಸರ್ಜನೆ ಮಾಡಲಾಗುತ್ತದೆ. ದಿನಾಂಕ 13-01-2023ರಂದು ಮಹಾಮಂಗಳಾರತಿ ಬಳಿಕ, ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ