ಚಿತ್ರದುರ್ಗ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅನಾಥ ಶವಕ್ಕೆ ಹಿರಿಯೂರು ಗ್ರಾಮಾಂತರ ಇಲಾಖೆಯ ಎಎಸ್ಐ ಪ್ರಭುಲಿಂಗಪ್ಪ ಹಾಗೂ ಕಾನ್ಸ್ಟೇಬಲ್ ಶಶಿಧರ್ ಅವರು ಹಿರಿಯೂರಿನ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಶಾಸ್ತ್ರೋಕ್ತವಾಗಿ ಮೃತರ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿರುವ ಪೋಲಿಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆ : ಹಿರಿಯೂರು ನಗರದ ಹೊರವಲಯದ ಚಳ್ಳಕೆರೆ ರಸ್ತೆಯ ಚಿನ್ನಯ್ಯನಹಟ್ಟಿ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.
ಅಪಘಾತವಾದ ರಭಸಕ್ಕೆ ಮಹಿಳೆಯ ದೇಹ ಗುರುತು ಸಿಗದಂತೆ ಛಿದ್ರ ಛಿದ್ರವಾ, ದೇಹದ ದಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಘಟನೆ ಬುಧವಾರ ಬೆಳಗಿನ ಸಮಯದಲ್ಲಿ ನಡೆದಿತ್ತು.
ಅಪಘಾತದಲ್ಲಿ ಮೃತಪಟ್ಟಿದ್ದವರನ್ನು 60 ರಿಂದ 65 ವರ್ಷದ ಮಹಿಳೆ ಎಂದು ಗುರುತಿಸಲಾಗಿತ್ತು. ದೇಹದ ಮೇಲೆ ಹಲವಾರು ವಾಹನಗಳು ಹರಿದು ಹೋಗಿರುವುದರಿಂದ ಮೃತದೇಹವು ಸಂಪೂರ್ಣ ನಜ್ಜು ಗುಜ್ಜಾಗಿರುತ್ತದೆ.
0.8 ಇಂಚು ಉದ್ದ ಇರುವ ಕಪ್ಪು ಬಿಳಿ ಮಿಶ್ರಿತ ಕೂದಲು, ಎಣ್ಣೆಗೆಂಪು ಮೈಬಣ್ಣ, ಕೆಂಪು ಬಣ್ಣದ ನೈಟಿ, ಕಪ್ಪು ಬಣ್ಣದ ಸ್ವೆಟರ್, ಹಳದಿ ಬಣ್ಣದ ಲಂಗವನ್ನು ಮೃತ ಮಹಿಳೆ ಧರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಅಪಘಾತ ನಡೆದ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷೆಕರಾದ ಆನಂದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚೆಲ್ಲಾಪಿಲ್ಲಿ ಆಗಿದ್ದ ಮೃತ ದೇಹವನ್ನು ಆಸ್ಪತ್ರೆಯ ಚಿತಗಾರದಲ್ಲಿ ಇರಿಸಲಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತರ ವಾರಸುದಾರರು ಯಾರು ಬಾರದ ಹಿನ್ನೆಲೆ ಹಾಗೂ ಮೃತರ ಚಹರೆ ಗುರುತು ಸಿಗದಿದ್ದರಿಂದ ಇಂದು ಪೊಲೀಸ್ ಇಲಾಖೆಯಿಂದ ಕಾನೂನಾತ್ಮಕವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮಂಡ್ಯದ ಮದ್ದೂರು ಕ್ಷೇತ್ರದ ಪ್ರತಿ ಮನೆಗೆ ಸಂಕ್ರಾಂತಿ ಗಿಫ್ಟ್: ಸೀರೆ, ಬಾಗೀನ ವಿತರಣೆಗೆ ಕದಲೂರು ಉದಯ್ ಚಾಲನೆ
ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರ: ಆರೋಪಿ ಚೈನ್ನೈನಲ್ಲಿ ಬಂಧನ