ಚಿತ್ರದುರ್ಗ: ಗಂಡಿಗೆ ಚಟ ಇರಬಾರದು, ಹೆಣ್ಣಿಗೆ ಹಠ ಇರಬಾರದು ಎಂಬ ಗಾದೆ ಮಾತಿನಂತೆ ಗಂಡನ ಕುಡಿತದ ಚಟ ಬಿಡಿಸಲು ಪತ್ನಿ ಮಾಡಿದ ಪ್ರಯತ್ನಗಳು ವಿಫಲವಾದಾಗ ಪತ್ನಿ ಮಾಡಿದ್ದೇನು ಗೊತ್ತಾ.? ಆ ಬಗ್ಗೆ ಮುಂದೆ ಓದಿ.
ಹೌದು ತನ್ನ ಗಂಡನ ಕುಡಿತದ ದಾಸ್ಯಕ್ಕೆ ಬಲಿಯಾಗಿದ್ದರಿಂದ ಆತನನ್ನು ಮದ್ಯಪಾನದಿಂದ ಹೊರ ತರಲು ಪತಿಗೆ ಪತ್ನಿಯೇ ಗಂಡನ ಕಾಲಿಗೆ ಸರಪಳಿಯಿಂದ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹೌದು ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಉಮೇಶ್ ಎಂಬಾತ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಪತ್ನಿ ಕುಡಿತ ಬಿಟ್ಟು ಸಂಸಾರದ ಕಡೆ ಗಮನ ಹರಿಸುವಂತೆ ಎಷ್ಟೇ ಹೇಳಿದರೂ ಗಂಡ ಮಾತ್ರ ಹೆಂಡ್ತಿ ಬಿಟ್ರೆ ಬಿಡ್ತೀನಿ ಹೆಂಡ ಮಾತ್ರ ಬಿಡಲ್ಲ ಎಂಬ ಸ್ಥಿತಿಯಲ್ಲಿದ್ದ. ಇನ್ನು ಈ ಕುಡಿದು ಬಂದು ಸುಮ್ಮನೆ ಇರಲಾರದೆ ಗಂಡ ಮನೆಯಲ್ಲಿ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಅಮೃತಾ ಅವರು ಪತಿ ಮನೆಯಿಂದ ಹೊರ ಹೋಗದಂತೆ ತಡೆಯಲು ಮನೆಯಲ್ಲಿಯೇ ಇದ್ದ ಕಂಬಕ್ಕೆ ಸರಪಳಿಯಿಂದ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಇನ್ನು ಇದೇ ತಾಲೂಕಿನ ಹೊಸಹಳ್ಳಿ ಗ್ರಾಮದವರಾದ ಅಮೃತ, ಹರ್ತಿಕೋಟೆ ಗ್ರಾಮದ ಉಮೇಶ್ ಜೊತೆ ಮದುವೆ ಆಗಿದ್ದರು. ಆದರೆ ಗಂಡ ಮಾತ್ರ ಸಂಸಾರದ ಕಡೆ ಗಮನ ಹರಿಸಿದೆ, ಹೆಂಡದ ಅಮಲಿನಲ್ಲಿ ತೇಲುತ್ತಿದ್ದ ಎನ್ನಲಾಗಿದ್ದು ಇದರಿಂದ ಬೇಸತ್ತ ಹೆಂಡತಿ ಗಂಡನ ಕುಡಿತ ತಪ್ಪಿಸಲು ಈ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಅಬ್ಬಿನಹೊಳೆ ಪಿಎಸ್ಐ ಪರುಶುರಾಮ್ ಎನ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಖರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚಿತ್ರದುರ್ಗ: ಅನಾಮಧೇಯ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಹಿರಿಯೂರು ಪೋಲಿಸರು
ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರ: ಆರೋಪಿ ಚೈನ್ನೈನಲ್ಲಿ ಬಂಧನ
ಮಂಡ್ಯದ ಮದ್ದೂರು ಕ್ಷೇತ್ರದ ಪ್ರತಿ ಮನೆಗೆ ಸಂಕ್ರಾಂತಿ ಗಿಫ್ಟ್: ಸೀರೆ, ಬಾಗೀನ ವಿತರಣೆಗೆ ಕದಲೂರು ಉದಯ್ ಚಾಲನೆ